Monday, April 27, 2026
ಸುದ್ದಿ

ನಾಲ್ಕು ಜನರನ್ನು ರಕ್ಷಣೆ ಮಾಡಿದ ಲೈಪ್ ಗಾರ್ಡ್ ಸಿಬ್ಬಂದಿಗಳು: ಒಬ್ಬ ಪ್ರವಾಸಿ ನೀರುಪಾಲು – ಕಹಳೆ ನ್ಯೂಸ್

ಮುರುಡೇಶ್ವರ: ಮುರುಡೇಶ್ವರದ ಸಮುದ್ರ ತೀರದಲ್ಲಿ ಐದು ಜನರ ತಂಡ ನೀರಿಗೆ ಇಳಿದಾಗ ಬಾರಿ ಅಲೆಗಳಿಗೆ ಕೊಚ್ಚಿಕೊಂಡು ಹೋಗುತ್ತಿರುವಾಗ ಅಲ್ಲೆ ನೇಮಿಸಿದ ಲೈಪ್ ಗಾರ್ಡ್ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಐದೂ ಜನರಲ್ಲಿ ನಾಲ್ಕು ಜನರನ್ನು ಸುರಕ್ಷಿತವಾಗಿ ನೀರಿನಿಂದ ಮೇಲಕ್ಕೆ ತಂದಿದಾರೆ ಆದರೆ ಒಬ್ಬ ಪ್ರವಾಸಿ ಕಣ್ಮರೆಯಾಗಿದ್ದಾನೆ ಅವನ ಹುಡುಗಕಾಟದಲ್ಲಿ ಲೈಪ್ ಗಾರ್ಡ್ ಸಿಬ್ಬಂದಿಗಳು ಹಾಗೂ ಸ್ಥಳೀಯ ಮೀನುಗಾರರು ಹುಡುಕಾಟ ಮುಂದುವರಿಸಿದ್ದಾರೆ.

ಅಲೆಗಳಲ್ಲಿ ಕಣ್ಮರೆಯಾದ ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಚಾಮರಾಜ ಪೇಟೆಯ ಯೋಗೆಶ, ಸುರೇಶ ನಾಯ್ಕ, ಸಿದ್ದರಾಜು ನಾಗರಾಜ ಶೆಟ್ಟಿ, ರವಿಶ ಎಚ್. ಆಯ್ ಇವರನ್ನು ಮುರುಡೇಶ್ವರದ ಲೈಪ್ ಗಾರ್ಡ್ ಸಿಬ್ಬಂದಿಗಳಾದ ಜಯರಾಮ ಹರಿಕಂತ್ರ ಚಂದ್ರಶೇಖರ ದೇವಾಡಿಗಾ ರಕ್ಷಣೆ ಮಾಡಿದ್ದಾರೆ ಲೈಪ್ ಗಾರ್ಡ್ ಸಿಬ್ಬಂದಿಗಳಿಗೆ ಪ್ರವಾಸಿ ಮಿತ್ರ ಮಂಜುನಾಥ ಶೇಟ್ ಕೈಜೋಡಿಸಿದರು.ಈ ಕುರಿತು ಮುರುಡೇಶ್ವರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.