Monday, April 27, 2026
ಸುದ್ದಿ

ಮುಸ್ಲಿಂ ಮಹಿಳೆಯರು ಹಿಜಬ್ ವಿರುದ್ಧ ವಾದಿಸಿದ ಮಹಿಳೆಗೆ 38 ವರ್ಷ ಸೆರಮನೆ ವಾಸ – ಕಹಳೆ ನ್ಯೂಸ್

ಮುಸ್ಲಿಂ ಮಹಿಳೆಯರು ಹಿಜಬ್ ಧರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಿಶ್ವದ ಇಸ್ಲಾಂ ರಾಷ್ಟ್ರಗಳಲ್ಲಿ ತೀವ್ರ ಚರ್ಚೆ ನಡುವೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಮುಸ್ಲಿಂ ಮಹಿಳೆಯರಿಗೆ ಹಿಜಬ್ ಬೇಡ ಎಂದು ವಾದಿಸಿದ್ದ ಇರಾನಿನ ಮಾನವಹಕ್ಕು ವಕೀಲೆ ನಸ್ರೀನ್ ಸೊಟೊಡೆ ಅವರಿಗೆ ನ್ಯಾಯಾಲಯವೊಂದು 38 ವರ್ಷದ ಸೆರ ವಾಸ ಹಾಗೂ 148 ಚಡಿ ಏಟಿನ ಶಿಕ್ಷೆಯನ್ನು ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಸ್ರೀನ್ ಅವರ ವಿರುದ್ಧ ಇರಾನಿನ ಸುರಕ್ಷತೆ ಅಪಾಯಕ್ಕೀಡು ಮಾಡಿದ ಮತ್ತು ಇರಾನ್ ವಿರುದ್ಧ ಬೇಹುಗಾರಿಕೆ ನಡೆಸಿದ ಪ್ರಕರಣಗಳು ದಾಖಲಿಸಲಾಗಿದೆ. 2012ರಲ್ಲಿ ಯುರೋಪಿಯನ್ ಯೂನಿಯನ್‍ನ ಮಾನವ ಹಕ್ಕು ಪುರಸ್ಕಾರಕ್ಕೆ ನಸ್ರೀನ್ ಪಾತ್ರರಾಗಿದ್ದರು.

ನಸ್ರೀನ್ ಅವರಿಗೆ ವಿಧಿಸಿರುವ ಈ ಶಿಕ್ಷೆ ಬಗ್ಗೆ ವಿಶ್ವದ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು , ಶಿಕ್ಷೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿವೆ.

ನಸ್ರೀನ್ ಅವರನ್ನು ಕಳೆದು ಎಂಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ಆದರೆ ಈ ಬಂಧನಕ್ಕೆ ಸರ್ಕಾರ ಯಾವುದೇ ಕಾರಣ ನೀಡಿರಲಿಲ್ಲ. ಆದರೆ ನಸ್ರಿನ್ ಶಿರ ವಸ್ತ್ರವನ್ನು ಬಹಿರಂಗವಾಗಿ ಎಸೆದ ಅಪರಾಧದಡಿಯಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳಾ ಪ್ರತಿಭಟನಾಕಾರ ಪರ ಕೆಲಸ ಮಾಡುತ್ತಿದ್ದರು.

ನಸ್ರೀನ್ ಪತಿ ರೇಝಾ ಖಾನ್ದಾನ್ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿದ್ದ ತನ್ನ ಪತ್ನಿಗೆ ಜೈಲು ಶಿಕ್ಷೆಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.