Sunday, April 26, 2026
ರಾಜಕೀಯಸುದ್ದಿ

ಮಾಜಿ ಸಿಎಂ ದಿ.ಕರುಣಾನಿಧಿ ಪುತ್ರಿ ಕನಿಮೋಳಿಗೆ ಟಿಕೆಟ್ ಘೊಷಣೆ – ಕಹಳೆ ನ್ಯೂಸ್

ಡಿಎಂಕೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮಾಜಿ ಸಿಎಂ ದಿ. ಕರುಣಾನಿಧಿ ಅವರ ಪುತ್ರಿ ಕನಿಮೋಳಿಗೆ ಟಿಕೆಟ್ ಘೋಷಿಸಲಾಗಿದೆ.

ರಾಜ್ಯಸಭೆ ಸದಸ್ಯರಾಗಿದ್ದ ಕನಿಮೊಳಿ ಇದೇ ಮೊದಲ ಬಾರಿಗೆ ನೇರ ಚುನಾವಣೆಯಲ್ಲಿ ಟಟಿಕೋರಿನ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಎ. ರಾಜ ಅವರಿಗೆ ನೀಲಗಿರಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಡಿಎಂಕೆ ನಾಯಕರಾದ ಕದೀರ್ ಆನಂದ್, ದೊರೈ ಮುರುಗನ್, ಕಲಾನಿಧಿ ವೀರಸ್ವಾಮಿ, ಹಿರಿಯ ನಾಯಕ ಪೊನ್ ಮುಡಿ ಅವರ ಪುತ್ರ ಗೌತಮ ಸಿಂಗಮಣಿಗೆ ಟಿಕೆಟ್ ನೀಡಲಾಗಿದೆ. ಕನಿಮೊಳಿ ಮೊದಲ ಬಾರಿಗೆ ನೇರ ಚುನಾವಣೆಯಲ್ಲಿ ರಾಜಕೀಯ ಪ್ರವೇಶಿಸುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವರಾದ ದಯಾನಿಧಿ ಮಾರನ್ ಮತ್ತು ಎ. ರಾಜ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದಾರೆ. ಟುಟಿಕೋರಿನ್ ಕ್ಷೇತ್ರದಲ್ಲಿ ನಾಡಾರ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದೆ. ಕನಿಮೊಳಿ ತನ್ನ ತಾಯಿಯ ಕಡೆಯಿಂದ ಈ ಸಮುದಾಯಕ್ಕೆ ಸೇರಿದ ಕಾರಣ ಇದೇ ಕ್ಷೇತ್ರವನ್ನು ಆಯ್ದುಕೊಂಡಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.