Sunday, April 26, 2026
ರಾಜಕೀಯಸುದ್ದಿ

ಇಲ್ಯಾಸ್ ಮುಹಮ್ಮದ್ ದ.ಕ. ಜಿಲ್ಲಾ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಆಯ್ಕೆ – ಕಹಳೆ ನ್ಯೂಸ್

ನಗರದ ನೆಹರೂ ಮೈದಾನದಲ್ಲಿ ನಡೆದ ಎಸ್‍ಡಿಪಿಐ ಜಿಲ್ಲಾ ಸಮಾವೇಶದಲ್ಲಿ ಎಸ್‍ಡಿಪಿಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಎಸ್‍ಡಿಪಿಐ ಅಭ್ಯರ್ಥಿಯಾಗಿ ಎಸ್‍ಡಿಪಿಐನ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೆಸರನ್ನು ಘೋಷಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ನಮ್ಮ ದೇಶದ ಆಡಳಿತದ ಚುಕ್ಕಾಣಿ ಹಿಡಿದಂತಹ ಪಕ್ಷಗಳು ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಾದವರು ದೇಶವನ್ನು ಹಿಂದಕ್ಕೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಿಟ್ಟಿನಲ್ಲಿ ಈ ದೇಶದ ಸ್ವಾತಂತ್ರ್ಯ, ಸಂವಿಧಾನವನ್ನು ಯಾವ ಬೆಲೆ ತೆತ್ತಾದರೂ ಉಳಿಸಿ, ಹಸಿವು ಮುಕ್ತ ದೇಶ, ಭಯ ಮುಕ್ತ ದೇಶವನ್ನಾಗಿ ಮಾಡಿ ಸಂವಿಧಾನದ ಆಶಯದಂತೆ ಭಾರತದ ಪುನನಿರ್ಮಾಣವೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಗುರಿ ಎಂದರು.

ಈ ದೇಶದಲ್ಲಿ ದಲಿತರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ರಕ್ಷಣೆ ಸಿಗಬೇಕಾದರೆ ಎಸ್‍ಡಿಪಿಐಯಿಂದ ಮಾತ್ರ ಸಾಧ್ಯ. ಆದ್ದರಿಂದ ನಿಜವಾದ ಪರ್ಯಾಯ ರಾಜಕೀಯ ಶಕ್ತಿಯನ್ನು ನೀವೆಲ್ಲರೂ ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.