
ಬೆಂಗಳೂರು : ತುಮಕೂರು ಕ್ಷೇತ್ರ ಕೈತಪ್ಪಿದ್ದಕ್ಕೆ ಅಸಮಾಧಾನ ಆಗಿತ್ತು. ಹೈಕಮಾಂಡ್ ಜೊತೆ ಮತ್ತೆ ಚರ್ಚೆ ನಡೆಸಿದ್ದು, ದೇವೇಗೌಡರು ಸ್ಪರ್ಧಿಸದಿದ್ದರೆ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಕೇಳಲಾಗಿದೆ. ಕ್ಷೇತ್ರ ತಪ್ಪಿಸುವುದರಿಂದ ಯಾರೋ ಒಬ್ಬರಿಗೆ ಸ್ಕೋರ್ ಹೆಚ್ಚಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿದ್ದ ತುಮಕೂರು ಕ್ಷೇತ್ರವನ್ನು ಕ್ಷೇತ್ರ ಹಂಚಿಕೆ ಸಂದರ್ಭದಲ್ಲಿ ಜೆಡಿಎಸ್ ಗೆ ಬಿಟ್ಟು ಕೊಟ್ಟಾಗ ನನಗೆ ಆತಂಕ, ಅಸಮಾಧಾನ ಆಗಿದ್ದು ನಿಜ. ಆದರೆ ಉದ್ದೇಶಪೂರ್ವಕವಾಗಿ ಕ್ಷೇತ್ರ ಕೈ ತಪ್ಪಿದೆ ಎಂದು ಅನಿಸುತ್ತಿಲ್ಲ ಎಂದು ಹೇಳಿದ್ದಾರೆ.
ತುಮಕೂರು ಕ್ಷೇತ್ರ ನಮ್ಮ ಬಳಿ ಉಳಿಯುವ ನಿರೀಕ್ಷೆಯಿತ್ತು. ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತೇನೆ. ದೇವೇಗೌಡರು ಸ್ಪರ್ಧಿಸದಿದ್ದರೆ ತುಮಕೂರು ಕ್ಷೇತ್ರವನ್ನು ವಾಪಸ್ ಕೊಡುವಂತೆ ಕೇಳಿದ್ದೇನೆ. ಒಂದು ಕ್ಷೇತ್ರವನ್ನು ಕೈತಪ್ಪಿಸುವುದರಿಂದ ಯಾರೋ ಒಬ್ಬರ ಸ್ಕೋರ್ ಹೆಚ್ಚಾಗಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಸಿದ್ಧರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.









