ಮನೋಹರ್ ಪರಿಕ್ಕರ್ ” was An Unparalleled ಲೀಡರ್ ” ; ಪ್ರಧಾನಿ ನರೇಂದ್ರ ಮೋದಿಯಿಂದ ಶ್ರೇಷ್ಠ ನಾಯಕನಿಗೆ ನುಡಿ ನಮನ – ಕಹಳೆ ನ್ಯೂಸ್

ದೆಹಲಿ : ಕೇಂದ್ರದ ರಕ್ಷಣಾ ಸಚಿವರಾಗಿ, ಗೋವಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮನೋಹರ ಪರಿಕ್ಕರ್ ನಿಧನ ಹಿನ್ನಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆಯಿಂದ ದೇಶಕ್ಕೆ ಅಪಾರ ನಷ್ಟವಾಗಿದೆ, ಅವರು ಒಬ್ಬ ಸರಿಸಾಟಿ ಇಲ್ಲದ ನಾಯಕ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದರೂ ಅದನ್ನು ಲೆಕ್ಕಿಸದೆ ಜೀವನದ ಕೊನೆ ಉಸಿರಿನ ಜನಸೇವೆ ಮಾಡಿದ ಪರಿಕ್ಕರ್ ಅವರನ್ನು ದೇಶದ ಜನತೆ ಎಂದೂ ಮರೆಯುವಂತಿಲ್ಲ. ಅವರ ಹೋರಾಟ, ಜನಸೇವೆ, ದೇಶಪ್ರೇಮ ಸದಾ ನಮಗೆ ಪ್ರೇರಣೆಯಾಗಿರುತ್ತದೆ ಎಂದು ಪ್ರಧಾನಿ ಸಂತಾಪದಲ್ಲಿ ತಿಳಿಸಿದ್ದಾರೆ.









