
ಪ್ರಶಾಂತ ವಾತಾವರಣದ ನಡುವೆ ಥೋ ಎಂದು ಬೋರ್ಗರೆಯುತ್ತಿದ್ದ ಜೋಗ ಜಲಪಾತ ಸದ್ದಿಲ್ಲದೆ ಮೌನವಾಗುತ್ತಿದೆ. ರಾಜ ರಾಣಿ ರೋರರ್ ರಾಕೇಟ್ಗಳಲ್ಲಿ ನೀರಿಲ್ಲದೆ ಸೊರಗಿ ಹೋಗಿದೆ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಜೋಗವನ್ನ ಯಾವ ಕಾಲದಲ್ಲಿಯು ನೀರು ಕಡಿಮೆಯಾಗದೆ ಸದಾ ನೀರಿನಿಂದ ತುಂಬಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ.

ಹಗಲಿನಲ್ಲಿ ಜಲಪಾತದ ಸೌಂದರ್ಯ ವೀಕ್ಷಿಸುತ್ತಿದ್ದ ಪ್ರವಾಸಿಗರು, ರಾತ್ರಿಯಲ್ಲಿ ಸಂಗೀತ ಕಾರಂಜಿಯ ಸೊಬಗಿಗೆ ಮಾರು ಹೋಗುತ್ತಿದ್ದರು. ಆದರೆ, ಸಂಗೀತ ಕಾರಂಜಿಯ ಲೇಸರ್ ಶೋ ವ್ಯವಸ್ಥೆ ಹಾಳಾಗಿ ೨ ವರ್ಷಗಳೇ ಕಳೆದರೂ, ದುರಸ್ತಿಯಾಗಿಲ್ಲ.
ಜಲಪಾತದ ಪ್ರದೇಶದಲ್ಲಿ ಬೀದಿ ದೀಪಗಳು ಹಾಳಾಗಿ ಹೋಗಿವೆ. ಸಿಸಿ ಟಿವಿ ಕ್ಯಾಮರಾಗಳು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸ್ವಾಗತ ಫಲಕದ ಸಮೀಪ ನಿರ್ಮಿಸಲಾಗಿದ್ದ ಕೃತಕ ಜಲಪಾತ ಕೂಡ ಹಾಳಾಗಿದೆ. ಮಕ್ಕಳ ಆಟಿಕೆ ಪಾರ್ಕ್ ಹಾಳಾಗಿ ಹೋಗಿದೆ. ಇದೇ ವೇಳೆ ಜಲಪಾತ ವೀಕ್ಷಣೆಗೆ ಪ್ರವೇಶ ಶುಲ್ಕವನ್ನು ಏರಿಕೆ ಮಾಡಲಾಗಿದ್ದು, ಪ್ರವಾಸಿಗರಿಗೆ ಬರೆ ಎಳೆದಂತಾಗಿದೆ ಎಂದು ಹೇಳಲಾಗಿದೆ.









