Recent Posts

Friday, June 19, 2026
ಸುದ್ದಿ

ಟ್ಯೂಷನ್‌ನಿಂದ ಸಂಗ್ರಹವಾದ ಹಣದಿಂದ ಪುತ್ತೂರು ದೇವಸ್ಥಾನದ ಕೊಡಿಮರ ಸ್ವರ್ಣ ಕವಚ ನಿರ್ಮಾಣಕ್ಕೆ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು: ಮಕ್ಕಳಿಗೆ ಟ್ಯೂಷನ್ ನೀಡುವ ಮೂಲಕ ಸಂಗ್ರಹವಾದ ಹಣ ರೂ. 10 ಸಾವಿರವನ್ನು ನೇಹಾ ರೈಯವರು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಕೊಡಿಮರ ಸ್ವರ್ಣ ಕವಚ ನಿರ್ಮಾಣಕ್ಕೆ ಸಮರ್ಪಣೆ ಮಾಡಿದರು.

ಜಾಹೀರಾತು
ಜಾಹೀರಾತು

ನೇಹಾ ರೈಯವರು ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮನೆಯಲ್ಲೇ ಟ್ಯೂಷನ್ ನೀಡುತ್ತಿದ್ದಾರೆ ಅದರಿಂದ ಸಂಗ್ರಹವಾದ ಹಣವನ್ನು ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುದಾಕರ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೇವಳದ ಪ್ರಧಾನ ಅರ್ಚಕ ಎ. ವಸಂತ ಕೆದಿಲಾಯ ಪ್ರಾರ್ಥನೆ ಮಾಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ನೇಹಾ ರೈ ಅವರ ತಾಯಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಯನ ರೈ ಜೊತೆಗಿದ್ದರು.