
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ
ಮಲತಂದೆಯೊಬ್ಬ ತನ್ನ 18 ವರ್ಷದ ಮಗನನ್ನು ಬರ್ಬರವಾಗಿ ಕೊಲೆ ಮಾಡಿ, ಪತ್ನಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಹಮ್ ದಾಸ್ ಕೊಲೆಯಾದ ಯುವಕ. ಆರೋಪಿ ಮಲತಂದೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಆರು ತಿಂಗಳಿನಿಂದ ಸುದೀಪ್ ಮತ್ತು ಆತನ ಪತ್ನಿ ಸೀಮಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ನವೆಂಬರ್ 16ರ ರಾತ್ರಿ ಕೂಡ ಮನೆಯಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಸ್ವಲ್ಪ ಸಮಯದ ಬಳಿಕ ಗಲಾಟೆ ನಿಂತಿದ್ದರಿಂದ ನೆರೆಹೊರೆಯವರು ಹಾಗೂ ಮನೆ ಮಾಲಕರು ಅದನ್ನು ಸಾಮಾನ್ಯ ಕೌಟುಂಬಿಕ ಜಗಳವೆಂದು ಭಾವಿಸಿ ಸುಮ್ಮನಾಗಿದ್ದರು. ಆದರೆ, ಅದೇ ದಿನ ರಾತ್ರಿ ಸುದೀಪ್ ಪತ್ನಿ ಹಾಗೂ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ.
ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಮಗ ಮ್ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ
ಸುತ್ತಿಗೆಯಿಂದ ಹೊ*ಡೆದು, ಚಾಕುವಿನಿಂದ ಇರಿದು ಮಗ ಸೋಹಮ್ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಗಾಯಗೊಂಡಿದ್ದ ಪತ್ನಿ ಸೀಮಾಳನ್ನು ಕೋಣೆಯೊಳಗೆ ಕೂಡಿ ಹಾಕಿ, ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾನೆ.
ಮೂರು ದಿನಗಳಾದರೂ ಸೀಮಾ ಅಥವಾ ಸೋಹಮ್ ಮನೆಯಿಂದ ಹೊರಗೆ ಬಾರದಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ಮನೆ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಮನೆ ಮಾಲಕರು ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಕೀ ಮೇಕರ್ನ ಸಹಾಯದಿಂದ ಮನೆಯ ಬೀಗ ತೆಗೆಸಿದ್ದಾರೆ. ಈ ವೇಳೆ ಕೋಣೆಯೊಳಗಿನಿಂದ ಸೀಮಾ ಕೂಗುತ್ತಿರುವ ಧ್ವನಿ ಕೇಳಿಸಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಬಾತ್ ರೂಮ್ನಲ್ಲಿ ಸೋಹಮ್ನ ಮೃ*ತದೇಹ ಪತ್ತೆಯಾಗಿದೆ.











