Recent Posts

Sunday, November 22, 2026
ಸುದ್ದಿ

ಕುಂದಾಪುರ: ಬೆಂಗಳೂರು ಸಮೀಪ ನಡೆದ ಅಪಘಾತದಲ್ಲಿ ಕೋಟ ಮೂಲದ ಉದ್ಯಮಿ ಸಾವು-ಕಹಳೆ ನ್ಯೂಸ್

ಕುಂದಾಪುರ, ನ.21 : ಬೆಂಗಳೂರಿನ ಬಿಡದಿ ಸಮೀಪ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕೋಟ ಪಡುಕೆರೆ ಮೂಲದ ಹೋಟೆಲ್ ಉದ್ಯಮಿ ವಿಶ್ವನಾಥ್ ಎಚ್. (55) ಮೃತಪಟ್ಟಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ವಿಶ್ವನಾಥ್ ಅವರು ಕೋಟದ ಮಣೂರು-ಪಡುಕೆರೆಯ ಜಟ್ಟಿಗೇಶ್ವರ ದೈವಸ್ಥಾನದ ಸಮೀಪದ ನಿವಾಸಿಯಾಗಿದ್ದರು. ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಇವರು, ಇತ್ತೀಚೆಗೆ ಬಿಡದಿಯಲ್ಲಿ ‘ಕರಾವಳಿ ಕಿಚನ್’ ಹೆಸರಿನ ಹೋಟೆಲ್ ನಡೆಸುತ್ತಿದ್ದರು.
ಗುರುವಾರ ರಾತ್ರಿ ಹೋಟೆಲ್ ವಹಿವಾಟು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇವರು ಚಲಾಯಿಸುತ್ತಿದ್ದ ಬೈಕ್‌ಗೆ ಮತ್ತೊಂದು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ವಿಶ್ವನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.