ನವದೆಹಲಿ: ಕೋಲ್ಕತ್ತಾ-ಮುಂಬೈ ಏರ್ ಇಂಡಿಯಾ (ವಿಸ್ತಾರಾ) ವಿಮಾನಕ್ಕೆ ಹೈಜಾಕ್ ಬೆದರಿಕೆ ಹಾಕಿರುವ ಪತ್ರವೊಂದು ಪತ್ತೆಯಾಗಿದೆ.
ಕೋಲ್ಕತ್ತಾದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನ ಹೊರಟಿತ್ತು. ವಿಮಾನ ಹಾರಾಟಕ್ಕೂ ಮುನ್ನವೇ ವಿಮಾನವನ್ನು ಹೈಜಾಕ್ ಮಾಡುವ ಬೆದರಿಕೆ ಪತ್ರ ಪತ್ತೆಯಾಗಿದೆ. ಈ ಬಗ್ಗೆ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ಗೆ (ATC) ಮಾಹಿತಿ ನೀಡಿದ ನಂತರ, ವಿಮಾನದಲ್ಲಿ ಭದ್ರತಾ ಎಚ್ಚರಿಕೆ ಘೋಷಿಸಲಾಯಿತು.
ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಭದ್ರತಾ ತಪಾಸಣೆಗಾಗಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಈ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.
ಅಕ್ಟೋಬರ್ ತಿಂಗಳ ಆರಂಭದಲ್ಲಿ ಇದೇ ರೀತಿಯ ಪ್ರಕರಣವೊಂದು ವರದಿಯಾಗಿತ್ತು. ಫುಕೆಟ್ನಿಂದ ಆಗಮಿಸಿದ ವಿಮಾನವೊಂದರ ಶೌಚಾಲಯದ ಕನ್ನಡಿಯ ಮೇಲೆ ‘ವಿಮಾನದೊಳಗೆ ಬಾಂಬ್ ಇದೆ’ ಎಂದು ಬರೆದಿರುವುದು ಪತ್ತೆಯಾಗಿತ್ತು. ಆಗ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ‘ಪೂರ್ಣ ತುರ್ತುಸ್ಥಿತಿ’ಯನ್ನು ಘೋಷಿಸಲಾಗಿತ್ತು. ಫುಕೆಟ್ನಿಂದ ಬಂದ ವಿಮಾನವು ಕೋಲ್ಕತ್ತಾದಲ್ಲಿ ಇಳಿದ ನಂತರ, ವಿಮಾನದ ಸಿಬ್ಬಂದಿ ಶೌಚಾಲಯವನ್ನು ಸ್ವಚ್ಛಗೊಳಿಸಲು ಹೋದಾಗ ಈ ವಿಷಯ ಬೆಳಕಿಗೆ ಬಂದು ಆತಂಕ ಉಂಟು ಮಾಡಿತ್ತು.











