Wednesday, November 11, 2026
ಸುದ್ದಿ

ಬೊಳುವಾರಿನಲ್ಲಿ 32ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ- ಕಹಳೆ ನ್ಯೂಸ್

ಪುತ್ತೂರು : ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಹಾಗೂ ದೇವಾಲಯ ಸಂವರ್ಧನಾ ಸಮಿತಿ, ಪುತ್ತೂರು (ದ.ಕ) ಇದರ ವತಿಯಿಂದ ನಡೆಸಲ್ಪಡುತ್ತಿರುವ ಹಿಂದೂ ಧಾರ್ಮಿಕ ಶಿಕ್ಷಣದ 32ನೇ ಕೇಂದ್ರವನ್ನು ಪುತ್ತೂರಿನ ಬೊಳುವಾರು ಗಣೇಶ ಪ್ರಸಾದ ಕಟ್ಟಡದಲ್ಲಿರುವ, ಪ್ರೀಸ್ಕೂಲ್ ಮತ್ತು ಡೇ ಕೇರ್ ‘ಮಕ್ಕಳ ಮನೆ’ ಯಲ್ಲಿ ನವೆಂಬರ್ 10ರಂದು ಉದ್ಘಾಟಿಸಲಾಯಿತು.

ಜಾಹೀರಾತು

ಉಷಾ ಮೆಡಿಕಲ್ಸ್‌ ‌ನ ಮಾಲಕರಾದ ಪಿ. ಗಣೇಶ ಭಟ್ ಇವರು ದೀಪ ಬೆಳಗಿಸುವುದರ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು. ಬಳಿಕ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಶಿಕ್ಷಣವು ಮಕ್ಕಳ ಜೊತೆ ಹೆತ್ತವರಿಗೂ ಅತ್ಯಂತ ಅಗತ್ಯವಿದೆ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುವ ಮಕ್ಕಳಿಗೆ ಹಿರಿಯರಿಂದ ಅನಾಯಾಸವಾಗಿ ಇಂತಹ ಮೌಲ್ಯಯುತ ಮಾರ್ಗದರ್ಶನವು ತನ್ನಿಂದ ತಾನಾಗಿ ದೊರೆಯುತ್ತಿತ್ತು ಎಂದರು. ತನ್ನ ಚಿಕ್ಕಂದಿನಲ್ಲಿ ಚಂದಮಾಮ, ಅಮರ ಚಿತ್ರಕಥೆ ಪುಸ್ತಕಗಳಲ್ಲಿ ಪೌರಾಣಿಕ ಕಥೆಗಳನ್ನು ಓದಿ ಪ್ರಭಾವಿತರಾದ ಬಗ್ಗೆ ನೆನಪಿಸುತ್ತಾ, ಧಾರ್ಮಿಕ ಶಿಕ್ಷಣ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ದೇವಾಲಯ ಸಂವರ್ಧನ ಸಮಿತಿಯ ಸದಸ್ಯರಾದ ರಾಮದಾಸ್ ಗೌಡ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು. ಕೇಂದ್ರದ LKG ಪುಟಾಣಿ ಸ್ಕಂದರಾಮ ಪ್ರಾರ್ಥಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಕ್ಕಳ ಮನೆಯ ಮುಖ್ಯಸ್ಥರಾದ ಶ್ರೀಮತಿ ಸತ್ಯಪೂರ್ಣ ಇವರು ಕೇಂದ್ರದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಧಾರ್ಮಿಕ ಪುಸ್ತಕಗಳನ್ನು ಡಾ. ಸುಧಾ ರಾವ್ ಮತ್ತು ಪ್ರೊ. ವತ್ಸಲಾ ರಾಜ್ಞಿ ಇವರು ಹಸ್ತಾಂತರಿಸಿದರು. ಡಾ. ವಿಜಯ ಸರಸ್ವತಿಯವರು ಶ್ಲೋಕ ಹಾಗೂ ಅದರ ಅರ್ಥವನ್ನು ತಿಳಿಸಿಕೊಟ್ಟರು. ಶ್ರೀಮತಿ ಶಂಕರಿ ಶರ್ಮ ಕಥೆಯನ್ನು ಹೇಳಿ ಮಕ್ಕಳನ್ನು ರಂಜಿಸಿದರು. ಕಾರ್ಯಕ್ರಮ ದ ನಿರೂಪಣೆ ತೇಜಸ್ವಿರಾಜೇಶ್ ಅವರು ಮಾಡಿದರು, ಕೊನೆಯಲ್ಲಿ ವಿವಿಧ ವಿನೋದ ಆಟಗಳಿಂದ ಮಕ್ಕಳಲ್ಲಿ ಉತ್ಸಾಹ ತುಂಬಲಾಯಿತು.

ಶ್ರೀಯುತ ಪ್ರಶಾಂತ್ ದೊಡ್ಡಡ್ಕ, ಬೋಧಕ ವೃಂದ, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.