Wednesday, November 11, 2026
ಸುದ್ದಿ

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಏಳನೇ ವರ್ಷದ ತುಪ್ಪದ ದೀಪೋತ್ಸವ ಕಾರ್ಯಕ್ರಮ- ಕಹಳೆ ನ್ಯೂಸ್

ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಇದರ ಅಂಗವಾಗಿ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಏಳನೇ ವರ್ಷದ ತುಪ್ಪದ ದೀಪೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.

ಜಾಹೀರಾತು

ಪೊಳಲಿ ಟೈಗರ್ಸ್‌ನ ಸಂತೋಷ್ ಪೊಳಲಿ ಅವರ ಮುಂದಾಳತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಂದನ್ ಮಲ್ಯ , ರಶ್ಮಿತ್ ಶೆಟ್ಟಿ , ಸಂತೋಷ್ ಪೊಳಲಿ, ವಿಜಯ ಸುವರ್ಣ ಗುರೂಜಿ ,ಶೇಖರ್ ಉದ್ಯಮಿ ,ಅನುಷ್ ,ಉಮಾವತಿ ಮುರಂಜನ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದೀಪಾವಳಿ ಪ್ರಯುಕ್ತ ಪೊಳಲಿ ದೇವಸ್ಥಾನದ ಆವರಣದಲ್ಲಿ ಆದಿತ್ಯವಾರ ,ಸೋಮವಾರ ,ಮಂಗಳವಾರ 3 ದಿನಗಳ ಕಾಲ ಪೊಳಲಿ ಟೈಗರ್ಸ್‌ನ ಸಂತೋಷ್ ಪೊಳಲಿ ಅವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪೋತ್ಸವ ನಡೆಯಿತ್ತು