Tuesday, October 13, 2026
ಸುದ್ದಿ

ಶತಮಾನದ ಪರಂಪರೆಗೆ ಡಿಜಿಟಲ್ ಸ್ಪರ್ಶ: ಡಿ. ಶಿವ ಭಟ್ ಜ್ಯುವೆಲ್ಲರ್ಸ್ ವೆಬ್‌ಸೈಟ್ ಅನಾವರಣಗೊಳಿಸಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು- ಕಹಳೆ ನ್ಯೂಸ್

ಬೆಂಗಳೂರು: ನವರಾತ್ರಿಯ ಮೊದಲ ದಿನದ ಶುಭ ಸಂದರ್ಭದಲ್ಲಿ, ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶತಮಾನದ ಹೊಸ್ತಿಲಲ್ಲಿರುವ ಪ್ರತಿಷ್ಠಿತ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ನೂತನ ವೆಬ್‌ಸೈಟ್ ಅನ್ನು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನಾವರಣಗೊಳಿಸಿದರು.

ಜಾಹೀರಾತು

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಪುತ್ತೂರು ಸೇರಿದಂತೆ ಕರಾವಳಿ ಭಾಗದ ಕರಕುಶಲ ಕರ್ಮಿಗಳು ತಲೆಮಾರುಗಳಿಂದ ಬೆಳೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಚಿನ್ನದ ವಿನ್ಯಾಸಗಳು ಹಾಗೂ ವಿಶಿಷ್ಟ ಕಲಾಪ್ರಕಾರಗಳನ್ನು ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ವೆಬ್‌ಸೈಟ್ ರೂಪಿಸಿರುವುದು ಶ್ಲಾಘನೀಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಕರಕುಶಲ ಕರ್ಮಿಗಳ ಕಲಾನೈಪುಣ್ಯ, ಪರಂಪರೆ ಹಾಗೂ ಚಿನ್ನದ ಆಭರಣಗಳ ವಿಶಿಷ್ಟ ವಿನ್ಯಾಸಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ಈಶ್ವರ ಮುರಳಿ ಅವರು ಕೈಗೊಂಡಿರುವ ಪ್ರಯತ್ನ ಪ್ರಶಂಸನೀಯವಾಗಿದೆ ಎಂದು ತಿಳಿಸಿದರು.

ಶತಮಾನದ ಸನಿಹಕ್ಕೆ ಬಂದು ನಿಂತಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಸಂಸ್ಥೆಯು ತನ್ನ ಸುದೀರ್ಘ ಪರಂಪರೆ ಮತ್ತು ವೈಶಿಷ್ಟ್ಯಪೂರ್ಣ ವಿನ್ಯಾಸಗಳ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಸ್ಥಳೀಯ ಕರಕುಶಲ ಕಲೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮುಂದುವರಿಯಲಿ ಎಂದು ಶ್ರೀಗಳು ಶುಭ ಹಾರೈಸಿದರು.

ವೆಬ್‌ಸೈಟ್ ಅಭಿವೃದ್ಧಿ ಮತ್ತು ಆನ್‌ಲೈನ್ ಮಾರಾಟಕ್ಕೆ ಸಿದ್ಧತೆ

ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ನೂತನ ವೆಬ್‌ಸೈಟ್‌ನ ಕಾರ್ಯ ಪ್ರಸ್ತುತ ಪ್ರಗತಿಯಲ್ಲಿದ್ದು, ಆಭರಣಗಳ ವೈವಿಧ್ಯಮಯ ವಿನ್ಯಾಸಗಳು, ಸಾಂಪ್ರದಾಯಿಕ ಚಿನ್ನದ ಕಲಾಕೃತಿಗಳು ಹಾಗೂ ಸಂಸ್ಥೆಯ ಪರಂಪರೆಯನ್ನು ಒಳಗೊಂಡ ಸಮಗ್ರ ವೆಬ್‌ಸೈಟ್ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇದರೊಂದಿಗೆ, ಮುಂದಿನ ಒಂದು ತಿಂಗಳೊಳಗೆ ವೆಬ್‌ಸೈಟ್ ಮೂಲಕ ಆನ್‌ಲೈನ್ ಮಾರಾಟವನ್ನು ಆರಂಭಿಸಲು ಸಂಸ್ಥೆ ಯೋಜಿಸಿದೆ. ಇದರಿಂದ ಗ್ರಾಹಕರು ಮನೆಯಲ್ಲಿಯೇ ಕುಳಿತು ಆಭರಣಗಳ ವಿನ್ಯಾಸಗಳನ್ನು ವೀಕ್ಷಿಸಿ, ಆನ್‌ಲೈನ್ ಮೂಲಕ ಖರೀದಿಸುವ ಅವಕಾಶ ಪಡೆಯಲಿದ್ದಾರೆ. ಈ ಉಪಕ್ರಮವು ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ಸಾಂಪ್ರದಾಯಿಕ ಆಭರಣಗಳ ವೈಭವವನ್ನು ದೇಶ-ವಿದೇಶಗಳ ಗ್ರಾಹಕರಿಗೆ ತಲುಪಿಸುವುದರ ಜೊತೆಗೆ ಸಂಸ್ಥೆಯ ಡಿಜಿಟಲ್ ವಾಣಿಜ್ಯ ಬೆಳವಣಿಗೆಗೆ ಹೊಸ ದಾರಿ ತೆರೆಯಲಿದೆ.

ವೆಬ್‌ಸೈಟ್: www.shivabhatjewellers.com