Recent Posts

Sunday, October 4, 2026
ಸುದ್ದಿ

ಬಾಂಬೆ ಜೂಡೋ ಕ್ಲಬ್ ವತಿಯಿಂದ ನಡೆದ ಸ್ಪೋರ್ಟ್ಸ್ ಜುಡೋ ದಲ್ಲಿ ಬ್ರೌನ್ ಬೆಲ್ಟ್ ಪಡೆದು ವಿಶೇಷ ಸಾಧನೆಗೈದ ವಿಟ್ಲದ ಪ್ರತಿಭೆ : ಕಿರಿ ವಯಸ್ಸಿನಲ್ಲೇ ಕರಾಟೆ Black Belt ಸಾಧನೆಗೈದು, ಜುಡೋದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮೌಶ್ಮಿ ಶೆಟ್ಟಿ- ಕಹಳೆ ನ್ಯೂಸ್

ಶ್ರೀ ದುರ್ಗಾ ಪರಮೇಶ್ವರಿ ಸೇವಾ ಟ್ರಸ್ಟ್ (ರಿ) ಹಾಗೂ ತಾರಿಕಿಟ ಕಲಾ ಕಮ್ಮಟ (ರಿ) ಬಿ ಸಿ ರೋಡ್ ಆಯೋಜಿಸಿದ ಬಾಂಬೆ ಜೂಡೋ ಕ್ಲಬ್ ( Affiliated to Mumbai Judo Association) ವತಿಯಿಂದ ನಡೆದ ಕ್ರೀಡಾ ಜುಡೋ ದಲ್ಲಿ ಮೌಶ್ಮಿ ಶೆಟ್ಟಿಯವರು ಭಾಗವಹಿಸಿ Kyu ವಿಭಾಗದಲ್ಲಿ ಬ್ರೌನ್ ಬೆಲ್ಟ್ ಪಡೆದು ಉತ್ತಮ ಶ್ರೇಣಿಯನ್ನು ಪೂರೈಸಿರುತ್ತಾರೆ.
ಅಳಿಕೆ ಮಾಧವ ಸೆನ್ಸಾಯಿ ಇವರಿಂದ ಕರಾಟೆ ತರಭೇತಿಯನ್ನು ಪಡೆಯುತ್ತಿರುವ ಮೌಶ್ಮಿ ಶೆಟ್ಟಿಯವರು ಸಣ್ಣ ವಯಸ್ಸಿನಲ್ಲೇ ಕರಾಟೆಯಲ್ಲಿ *BLACK BELT* ಪಡೆದು ಸಾಧನೆಗೈದಿರುತ್ತಾರೆ. ಇದೀಗ ಜೂಡೋ ತರಭೇತಿಯನ್ನು Judo 7th dan ಮಾಸ್ಟರ್ ಯತೀಶ್ ಬಂಗೇರ ಮುಂಬೈ ಯವರಿಂದ ಪಡೆದು ಬ್ರೌನ್ ಬೆಲ್ಟ್ ಪಡೆದಿರುತ್ತಾರೆ.
ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಜೂಡೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ಮೌಶ್ಮಿ ಶೆಟ್ಟಿ ಅಕ್ಟೋಬರ್ 8 ರಿಂದ 10 ರ ವರೆಗೆ ಬಾಗಲಕೋಟೆಯಲ್ಲಿ ನಡೆಯುವ 2026-27 ನೇ ಸಾಲಿನ 14/17 ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ರಾಜ್ಯ ಮಟ್ಟದ ಜೂಡೋ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಮೌಶ್ಮಿ ಶೆಟ್ಟಿಯವರು ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಸ್ನೇಹ-ರಾಮದಾಸ್ ಶೆಟ್ಟಿಯವರ ಪುತ್ರಿಯಾಗಿದ್ದಾರೆ.

ಜಾಹೀರಾತು

     

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜೂಡೋ ಆಧುನಿಕ ಜಪಾನಿನ ಸಮರ ಕಲೆ ಮತ್ತು ಒಲಿಂಪಿಕ್ ಯುದ್ಧ ಕ್ರೀಡೆಯಾಗಿದ್ದು, ಇದು ಲಿವರ್ ಮತ್ತು ತ್ವರಿತ ಚಲನೆಗಳನ್ನು ಬಳಸಿಕೊಂಡು ಎದುರಾಳಿಯನ್ನು ಎಸೆಯುವುದು, ಪಿನ್ ಮಾಡುವುದು ಮತ್ತು ಮಣಿಸುವುದರ ಮೇಲೆ ಕೇಂದ್ರೀಕರಿಸಿದೆ.

ಇತಿಹಾಸ ಮತ್ತು ಮೂಲಗಳು
• 1882 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ಕಾನೋ ಜಿಗೊರೊ ರಚಿಸಿದರು.
• ಸುರಕ್ಷಿತ ಅಭ್ಯಾಸ ವಿಧಾನವನ್ನು ರಚಿಸಲು ಅಪಾಯಕಾರಿ ಹೊಡೆಯುವ ಮತ್ತು ಆಯುಧ ತಂತ್ರಗಳನ್ನು ತೆಗೆದುಹಾಕುವ ಮೂಲಕ ಸಾಂಪ್ರದಾಯಿಕ ಜುಜುಟ್ಸು ಶಾಲೆಗಳಿಂದ ವಿಕಸನಗೊಂಡಿತು.
• “ಸೌಮ್ಯ ಮಾರ್ಗ” ಎಂದು ಅನುವಾದಿಸಲಾಗಿದೆ, ಎದುರಾಳಿಯನ್ನು ನೇರವಾಗಿ ವಿರೋಧಿಸುವ ಬದಲು ಅವರ ವಿರುದ್ಧ ತನ್ನದೇ ಆದ ಬಲವನ್ನು ಬಳಸಿಕೊಳ್ಳುತ್ತದೆ.
• 1964 ರಲ್ಲಿ ಪುರುಷರಿಗೆ ಮತ್ತು 1992 ರಲ್ಲಿ ಮಹಿಳೆಯರಿಗೆ ಅಧಿಕೃತ ಒಲಿಂಪಿಕ್ ಕ್ರೀಡೆಯಾಯಿತು.