Recent Posts

Sunday, October 4, 2026
ಸುದ್ದಿ

ಅರ್ಯಾಪು ಗ್ರಾಮದ ದೊಡ್ಡಡ್ಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ- ಕಹಳೆ ನ್ಯೂಸ್

ಅರ್ಯಾಪು ಗ್ರಾಮದ ದೊಡ್ಡಡ್ಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಜಂಗಮುಗೇರು ಇವರ ಉಪಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಪೂಜೆ ಬಳಿಕ ಬಿಡುಗಡೆಗೊಳಿಸಲಾಯಿತು. ನವರಾತ್ರಿ ಉತ್ಸವವು ದಿನಾಂಕ :11/10/2026 ನೇ ಆದಿತ್ಯವಾರ ದಿಂದ 20/10/2026 ನೇ ಮಂಗಳವಾರ ತನಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದಲ್ಲಿ ವಿವಿಧ ಸೇವಾದಾರರಿಂದ ನವರಾತ್ರಿ ಸೇವೆ ಹಾಗೂ ಭಜನಾ ಮಂಡಳಿಗಳಿಂದ ಸಂಕೀರ್ತನಾ ಸೇವೆ ಹಾಗೂ ಅನ್ನದಾನ ಸೇವೆ ನಡೆಯಲಿದೆ. ಅರ್ಚಕರಾದ ವೆಂಕಟಕೃಷ್ಣ ಪಾಲೆಚ್ಚಾರು, ಗಣಪತಿ ನಾಯಕ್ ಪಾಲೆಚ್ಚಾರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು
ದಿನಾಂಕ 20/10/2026 ನೇ ಮಂಗಳವಾರ ರಾತ್ರಿ 9.00ರಿಂದ ಸಾರ್ವಜನಿಕ ಆಯುಧ ಪೂಜೆ, ಮಹಾಪೂಜೆ.ಅನ್ನಸಂತರ್ಪಣೆ ನಡೆಯಲಿದೆ. ದಿನಾಂಕ 18/10/2026 ನೇ ಆದಿತ್ಯವಾರ ಬೆಳಿಗ್ಗೆ 10.00 ಗಂಟೆಗೆ ಸ್ಥಳೀಯ ಸಾರ್ವಜನಿಕ ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.ಹಾಗೂ ಊರ ಪರಊರ ಎಲ್ಲಾ ಭಕ್ತಾಧಿಗಳು ಆಗಮಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು