Friday, June 12, 2026
ಸುದ್ದಿ

ಎನ್‌ಕೌಂಟರ್‌ನಲ್ಲಿ ಆರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ – ಕಹಳೆ ನ್ಯೂಸ್

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್​ ಭಾಗದಲ್ಲಿ ನಡೆದ ಉಗ್ರರು ಹಾಗೂ ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಉಗ್ರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದೆ.

ಜಾಹೀರಾತು

ಐಜಿಪಿ ಸ್ವಯಂ ಪ್ರಕಾಶ್‌ ಅವರು ತ್ರಾಲ್‌ ಎನ್‌ಕೌಂಟರ್‌ನಲ್ಲಿ ಯೋಧರು 6 ಉಗ್ರರನ್ನು ಕೊಂದಿರುವುದನ್ನು ದೃಢಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉಗ್ರರು ತ್ರಾಲ್‌ ಪ್ರದೇಶದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಐಜಿಪಿ ಹೇಳಿದರು.

ಕಳೆದ ವಾರ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ನಡುವಿನ ಸಂಘರ್ಷದಲ್ಲಿ ಓರ್ವ ಸೈನಿಕ, ಏಳು ಮಂದಿ ಪೌರರು ಮೃತಪಟ್ಟು ಮೂರು ಡಜನ್‌ಗೂ ಹೆಚ್ಚು ಪ್ರತಿಭಟನಕಾರರು ಗಾಯಗೊಂಡಿದ್ದರು.