Thursday, October 1, 2026
ಸುದ್ದಿ

ಪರಿಶುದ್ಧ ಮನಸ್ಸಿನಿಂದಲೇ ದೇವರನ್ನು ಕಾಣಬೇಕು ನಾರಾಯಣ ಗುರು* ” :ಸಚಿನ್ ಅಮೀನ್ ಪೆರಾಜೆ-ಕಹಳೆ ನ್ಯೂಸ್

ಯುವವಾಹಿನಿ (ರಿ.) ಮಾಣಿ ಘಟಕದ ಮನೆ ಮನೆಗೆ ಗುರುತತ್ತ್ವ ಸಂದೇಶ ಕಾರ್ಯಕ್ರಮವು ಸೆಪ್ಟೆಂಬರ್ 28ರಂದು ರವಿ ಭಂಡಾರಿ ಕೆದಿಲ ಅವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಅಮೀನ್ ಪೆರಾಜೆ, “ಪರಿಶುದ್ಧ ಮನಸ್ಸು ಮತ್ತು ನಿರ್ಮಲ ಹೃದಯದಿಂದಲೇ ದೇವರನ್ನು ಕಾಣಲು ಸಾಧ್ಯ. ನಾರಾಯಣ ಗುರುಗಳ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ” ಎಂದು ಹೇಳಿದರು.

ಜಾಹೀರಾತು

ಗ್ರಾಮದ ದೈವದ ಚಾಕ್ರಿಯಾಗಿ ಸೇವೆ ಸಲ್ಲಿಸುತ್ತಿರುವ ರವಿ ಭಂಡಾರಿ ಮಾತನಾಡಿ, ನಾರಾಯಣ ಗುರುಗಳ ತತ್ತ್ವಸಂದೇಶಗಳು ತಮಗೆ ಬಹಳ ಪ್ರಿಯವಾಗಿದ್ದು, ತಮ್ಮ ಮನೆಯಲ್ಲಿ ಭಜನೆ ಹಾಗೂ ತತ್ವ ಸಂದೇಶವನ್ನು ಮಾಡಬೇಕೆಂಬ ಮಹಾದಾಸೆ ಹೊಂದಿದ್ದೆ. ಈ ಆಶಯದಂತೆ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದ್ದು, ಯುವವಾಹಿನಿ ಘಟಕಕ್ಕೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ, ರಮೇಶ್ ಪೂಜಾರಿ, ನಿರ್ದೇಶಕರು ಸುರೇಶ್ ಪೂಜಾರಿ, ಸತೀಶ್ ಮುರುವ, ರಾಜೇಶ್ ಕೋಟ್ಯಾನ್, ಜನಾರ್ದನ, ಯಶೋದಾ, ಬಾಲಕೃಷ್ಣ ಶೇರಾ, ದಿನೇಶ್, ಸುಜಿತ್ ಸೇರಿದಂತೆ ಯುವವಾಹಿನಿ ಸದಸ್ಯರು ಹಾಗೂ ಮನೆಯ ಆಸುಪಾಸಿನವರು ಉಪಸ್ಥಿತರಿದ್ದರು. ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪೂಜಾರಿ ಮುಜಲ ವಂದಿಸಿದರು.