
ಪುತ್ತೂರಿನ ಆಹಾರ ತಾಜ್ಯದಿಂದ ಉತ್ಪಾದಿಸ ಲಾಗುವ ಹಾಗೂ ಉನ್ನತ ಏನ್.ಪಿ.ಕೆ ಇರುವ ಸಾವಯವ ಸ್ಲರಿ ಗೊಬ್ಬರವನ್ನು ಕೃಷಿ ತೋಟದ ಗಿಡಗಳ ಬುಡಕ್ಕೆ ಸರಬರಾಜು ಮಾಡುವ ಒಡಂಬಡಿಕೆಗೆ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಹಾಗೂ ಕೃಷಿಕರ ಒಡನಾಡಿ ಸಂಸ್ಥೆ ಪಿಂಗಾರ ಸಹಿ ಹಾಕಿದೆ. ಈ ವಿಚಾರವಾಗಿ ನಡೆದ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಒಡಂಬಡಿಕೆಗೆ ಸಹಿ ಹಾಕುತ್ತ ಸ್ಲರಿ ಟ್ಯಾಂಕನ್ನು ಪಿಂಗಾರ ಸಂಸ್ಥೆಗೆ ಹಸ್ತಾಂತರಿಸಲಾಯಿತು.
ಪ್ರತಿ ದಿನ ಸುಮಾರು 15000+ ಲೀಟರ್ ವರೆಗೆ ಸ್ಲರಿ ಲಭ್ಯವಿದ್ದು ಇದನ್ನು ಪಿಂಗಾರ ಸಂಸ್ಥೆಯ ಸಂಪೂರ್ಣ ನೇತೃತ್ವದಲ್ಲಿ ಕೃಷಿಕರ ತೋಟಗಳಿಗೆ ತಲುಪಿಸಲಾಗುವುದು. ಎಂದು ಕೃಷ್ಣ ನಾರಾಯಣ ಮುಳಿಯ ಹೇಳಿದರು.
ಪಿಂಗಾರ ಸಂಸ್ಥೆಯ ಅಧ್ಯಕ್ಷರಾದ ರಾಜಾರಾಮ್ ಸಿ ಜಿ ಬಲಿಪಗುಳಿ ಮಾತನಾಡಿ ಈ ಸ್ಲರಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕ ಅಂಶಗಳಿದ್ದು ಹಾಗೂ ಅತೀ ಕಡಿಮೆ ದರದಲ್ಲಿ ನೀಡಲಾಗುತ್ತಿದ್ದು, ಇದು ನಮ್ಮ ಕೃಷಿ ಕರಿಗೆ ತುಂಬಾ ಅನುಕೂಲ ಆಗಲಿದೆ ಎಂದರು. ನಾವು ಇದನ್ನು ತೋಟದ ಗಿಡಗಳ ಬುಡದವರೆಗೆ ತಲುಪಿಸಲಿದ್ದೇವೆ ಎಂದರು.
ನಮ್ಮ ಈ ಒಡಂಬಡಿಕೆ ಕೃಷಿಕರನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದರು. ಈ ಕುರಿತಂತೆ ಮಾತನಾಡಿದ ನಗರಪಾಲಿಕೆ ಕಮಿಷಿನರ್ ವಿದ್ಯಾ ಕಾಳೆ “ಈ ವಿಶೇಷ ಸಹಾಭಾಗಿತ್ವ ಕೃಷಿ ಸಮೂಹಕ್ಕೆ ಸಹಕರಿಯಾಗಲಿ” ಎಂದು ಶುಭ ಹಾರೈಸಿದರು.
ಕಳೆದ 1 ವರ್ಷದಿಂದ ಈ ಸ್ಲರಿ ಗೊಬ್ಬರವನ್ನು ಕೆಲವು ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಬಳಸಲಾಗಿದ್ದು ಉತ್ತಮ ಫಲಿತಾಂಶ ಸಿಕ್ಕಿರುತ್ತದೆ ಎಂದು ಈ ಸಂದರ್ಭದಲ್ಲಿ ವಿವರಿಸಲಾಯಿತು. ಆಸಕ್ತರು ನೇರವಾಗಿ ಪಿಂಗಾರ ಸಂಸ್ಥೆಯನ್ನು ಸಂಪರ್ಕಿಸಬೇಕಾಗಿ ಕೋರಿಕೆ.: 9845955799
ಈ ಸಂದರ್ಭದಲ್ಲಿ ಪಿಂಗಾರ ಸಂಸ್ಥೆಯ ಸಿಇಓ : ಪ್ರದೀಪ್ ಎಸ್ ನಿರ್ದೇಶಕರಾದ ರಾಮಕಿಶೋರ್ ಕೆ, ಶ್ಯಾಮಸುಂದರ್ ಎನ್, ಪ್ರಕಾಶ್ ವಿ, ಜಯಪ್ರಕಾಶ್ ನಾಯಕ್, ಸಾಯಿಗೀತಾ ಸಿ ಎಚ್, ಗಣೇಶ್ ಕೆ ಎಂ ಹಾಗೂ ಪುತ್ತೂರು ನಗರಪಾಲಿಕೆ ಪರಿಸರ ವಿಭಾಗದ ಅಧಿಕಾರಿ ಶಬರಿನಾಥ್ ರೈ ಹಾಗೂ ಸಲಹೆಗಾರ ವೇಣು ಶರ್ಮ ಉಪಸ್ಥಿತರಿದ್ದರು.( photo)











