Friday, September 25, 2026
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಧಕರಿಗೆ ವಿವಿಧ ಪ್ರಶಸ್ತಿ : ಅ.10ರೊಳಗೆ ಅರ್ಜಿ ಸಲ್ಲಿಸಲು ಮನವಿ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ) ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡು-ನುಡಿಗೆ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಸಮಾರಂಭವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಜಾಹೀರಾತು

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಭೂಷಣ ಪ್ರಶಸ್ತಿ’, ‘ಸಹಕಾರ ರತ್ನ ಪ್ರಶಸ್ತಿ’, ‘ಸಮಾಜ ಸೇವಾ ರತ್ನ ಪ್ರಶಸ್ತಿ’, ‘ಶಿಕ್ಷಣ ರತ್ನ ಪ್ರಶಸ್ತಿ’, ‘ಕನ್ನಡ ರತ್ನ ಪ್ರಶಸ್ತಿ’ ಹಾಗೂ ‘ಕರ್ನಾಟಕ ರತ್ನ ಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶಿಕ್ಷಣ, ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಕೈಗಾರಿಕೆ, ಕಾನೂನು, ಪರಿಸರ, ಸಮಾಜಸೇವೆ, ಸಂಶೋಧನೆ, ಕುಸ್ತಿ, ವೈದ್ಯಕೀಯ ಸೇವೆ, ಉದ್ಯಮ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಆಡಳಿತ, ಪತ್ರಿಕೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಸೇವೆ, ಗುಡಿ ಕೈಗಾರಿಕೆ, ನಾಡು-ನುಡಿ, ಜನಪರ ಹೋರಾಟ, ಉದ್ಯೋಗ ಸೃಷ್ಟಿ, ಕೋಮು ಸಾಮರಸ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹ ಸ್ತ್ರೀ-ಪುರುಷರು ಹಾಗೂ ಮಕ್ಕಳು ತಮ್ಮ ಬಯೋಡೆಟಾ, ಸಾಧನೆಯನ್ನು ಗುರುತಿಸುವ ಪ್ರಮಾಣಪತ್ರಗಳು ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳನ್ನು ಸಲ್ಲಿಸಬೇಕು. ಅರ್ಜಿಗಳು 2026ರ ಅಕ್ಟೋಬರ್ 10ರೊಳಗೆ ನಿಗದಿತ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕೆಂದು ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಮನವಿ ಮಾಡಿದೆ.

ಅರ್ಜಿ ಕಳುಹಿಸಬೇಕಾದ ವಿಳಾಸ:
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ),
ನಂ.03, 4ನೇ ಮುಖ್ಯರಸ್ತೆ, ಬೈರಪ್ಪ ರೋಡ್,
ಬಿ.ಡಬ್ಲ್ಯೂ.ಎಸ್.ಎಸ್.ಬಿ ಕಚೇರಿ ಹತ್ತಿರ,
ಅನ್ನಪೂರ್ಣೇಶ್ವರಿ ನಗರ, ಮಲ್ಲತಳ್ಳಿ,
ಐ.ಟಿ.ಐ ಎಂಪ್ಲಾಯೀಸ್ ಲೇಔಟ್, ಬೆಂಗಳೂರು–560091.
ಮೊಬೈಲ್: 9916690077, 8123253337.