ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜಿಗೆ ವಿ.ವಿ ಮಟ್ಟದ ಚೆಸ್ ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು : ಸೆ.11, 12ರಂದು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾಟದಲ್ಲಿ, ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ಯಾಯತ್ತ) ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ತೃತೀಯ ಬಿಎಸ್ಸಿಯ ಸಾಧನಾ ಕೆ ಉತ್ತಮ ಮೂರನೇ ಚೆಸ್ ಬೋರ್ಡ್ ಆಟಗಾರ್ತಿ ಪ್ರಶಸ್ತಿ ಮತ್ತು ತೃತೀಯ ಬಿಎಸ್ಸಿಯ ವಿದ್ಯಾಲಕ್ಷ್ಮಿ ಉತ್ತಮ ನಾಲ್ಕನೇ ಚೆಸ್ ಬೋರ್ಡ್ ಆಟಗಾರ್ತಿ ಪ್ರಶಸ್ತಿಯನ್ನು ಗಳಿಸಿದ್ದಾರೆ. ತೃತೀಯ ಬಿಎಸ್ಸಿಯ ನಿಶಾ ಆರ್ ಎಸ್, ತೃತೀಯ ಬಿಎಸ್ಸಿಯ ಸಹನಾ ಕೆ ಮತ್ತು ದ್ವಿತೀಯ ಬಿಎಸ್ಸಿಯ ಶ್ರೀಜನ್ಯ ಜಿ. ತಂಡವನ್ನು ಪ್ರತಿನಿಧಿಸಿದರು. ವಿಶ್ವವಿದ್ಯಾನಿಲಯ ವ್ಯಾಪ್ತಿಯ 27 ಕಾಲೇಜುಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ 5 ಸುತ್ತುಗಳಲ್ಲಿ 8 ಮ್ಯಾಚ್ ಪಾಯಿಂಟ್ ಗಳಿಸುವ ಮೂಲಕ ಈ ಪ್ರಶಸ್ತಿ ಗಳಿಸಿದೆ. ತಂಡದ ಈ ಸಾಧನೆಗೆ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.










