ಪುತ್ತೂರು ಶಿವಳ್ಳಿ ಸಂಪದಕ್ಕೆ ‘ಸ್ವರ್ಣ ಬಲ’ : ನೂತನ ಗೌರವಾಧ್ಯಕ್ಷರಾಗಿ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಆಯ್ಕೆ – ಕಹಳೆ ನ್ಯೂಸ್

ಪುತ್ತೂರಿನ ಹೆಮ್ಮೆಯ ಸ್ವರ್ಣೋದ್ಯಮಿ ದಿ|| ಜಿ.ಎಲ್. ಆಚಾರ್ಯರ ಪುತ್ರ ಹಾಗೂ ಈ ಭಾಗದ ಖ್ಯಾತ ಉದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ಅವರು, ಶಿವಳ್ಳಿ ಸಂಪದ ಪುತ್ತೂರು ಮತ್ತು ಕಡಬ ತಾಲೂಕು ಇದರ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಮಾತ್ರವಲ್ಲದೇ ಜಿ.ಎಲ್. ಆಚಾರ್ಯ ಜ್ಯುವೆಲ್ಲರಿ ಸಂಸ್ಥೆಯ ಮೂಲಕ ಉದ್ಯಮ ಕ್ಷೇತ್ರದಲ್ಲ್ಲೂ ತನ್ನದೇ ಅದ ಛಾಪು ಮೂಡಿಸಿರುವ ಬಲರಾಮ ಆಚಾರ್ಯರ ಈ ಆಯ್ಕೆ ಮೂಲಕ ಪುತ್ತೂರು ಮತ್ತು ಕಡಬ ತಾಲೂಕು ಶಿವಳ್ಳಿ ಸಂಪದಕ್ಕೆ ವಿಶೇಷ ಬಲ ಸಿಕ್ಕಿದಂತಾಗಿದೆ.
ಧರ್ಮ ಮತ್ತು ಶಿಕ್ಷಣ ಪ್ರೇಮಿಯೂ ಆಗಿರುವ ಬಲರಾಮ ಆಚಾರ್ಯರು ವಿಜಯರತ್ನ ಪ್ರಶಸ್ತಿ ಪುರಸ್ಕೃತರಾದವರು..
ಇವರು ಇದೀಗ ಶಿವಳ್ಳಿ ಸಂಪದಕ್ಕೆ ಮಾರ್ಗದರ್ಶನ ನೀಡಲು ಒಪ್ಪಿಕೊಂಡಿರುವುದಕ್ಕೆ ತಾಲೂಕು ಶಿವಳ್ಳಿ ಸಂಪದದ ಅಧ್ಯಕ್ಷ ಸತೀಶ್ ಮುಡಂಬಡಿತಾಯ, ಕಾರ್ಯದರ್ಶಿ ಬಾಲಚಂದ್ರ ಮುಚ್ಚಿನ್ತಾಯ, ಸಂಘಟನಾ ಕಾರ್ಯದರ್ಶಿ ರವೀಂದ್ರ ಟಿ, ಕೋಶಾಧಿಕಾರಿ ಕೃಷ್ಣರಾಜ ಎರಕಡಿತಾಯ, ನಿಕಟ ಪೂರ್ವ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ,ಪೂರ್ವ ಅಧ್ಯಕ್ಷ ಕೆ ಆರ್ ಆಚಾರ್,ಉಪಾಧ್ಯಕ್ಷ ಲಕ್ಶ್ಮೀನಾರಾಯಣ ಕಡಂಬಳಿತ್ತಾಯ, ನೆಲ್ಯಾಡಿ ವಲಯದ ರವಿಪ್ರಸಾದ್ ಆಚಾರ್ ಮುಂತಾದವರು ಆಚಾರ್ಯರ ಕಛೇರಿಗೆ ತೆರಳಿ ಅಭಿನಂದಿಸಿದರು.
ಮೂರು ದಶಕಗಳನ್ನು ಸಾಗಿ ಬಂದ ಶಿವಳ್ಳಿ ಸಂಪದ ಪುತ್ತೂರು ಇದರ ಸ್ಥಾಪಕ ಅಧ್ಯಕ್ಷರು ನನ್ನ ತಂದೆಯವರಾದ ಜಿಎಲ್ ಆಚಾರ್ಯರು ಎಂಬುದನ್ನು ನೆನಪು ಮಾಡಿಕೊಂಡಾಗ ಮತ್ತೆ ಈ ಸಂಸ್ಥೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ ಎಂದು ಬಲರಾಮ ಆಚಾರ್ಯರು ಅನಿಸಿಕೆ ವ್ಯಕ್ತಪಡಿಸಿದರು .
ಈ ಹಿಂದೆ ಪುತ್ತೂರು ಶಿವಳ್ಳಿ ಸಂಪದದ ಗೌರವಾಧ್ಯಕ್ಷರಾಗಿ ದ್ದ, ಹಿರಿಯ ವಕೀಲ ಹಾಗೂ ಸಾಮಾಜಿಕ ಮುಂದಾಳು ಎನ್ ಸುಬ್ರಹ್ಮಣ್ಯ ಕೊಳತ್ತಾಯರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಇದೀಗ ಬಲರಾಮ ಆಚಾರ್ಯರ ಆಯ್ಕೆಯೊಂದಿಗೆ ಸಂಪದದ ಕಾರ್ಯ ಚಟುವಟಿಕೆಗಳಿಗೆ ವಿಶೇಷ ಹುರುಪು ಬಂದಂತಾಗಿದೆ.











