
ಕಲ್ಲಡ್ಕ :. ಬಂಟ್ವಾಳ ತಾಲೂಕು ವೀರಕಂಭ ಹಾಲು ಉತ್ಪಾದಕರ ಸಹಕಾರ ಸಂಘ( ನಿ.) 2025=26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟಂಬರ್ 18 ಶುಕ್ರವಾರ ವೀರಕಂಭ ಶ್ರೀ ಶಾರದಾ ಭಜನಾ ಮಂದಿರದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷೆ ತೇಜಾಕ್ಷಿ ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘವು 2025 – 26 ನೇ ಸಾಲಿನಲ್ಲಿ 3 ಕೋಟಿ 89 ಲಕ್ಷ ವ್ಯವಹಾರ ಮಾಡಿ ಸುಮಾರು 5 ಲಕ್ಷ ಹತ್ತು ಸಾವಿರ ಲಾಭವನ್ನು ಪಡೆದಿದ್ದು ಸಂಘದ ಸದಸ್ಯರಿಗೆ 25% ಡಿವಿಡೆಂಟ್ ಘೋಷಿಸಲಾಯಿತು. ದಕ್ಷಿಣ ಕನ್ನಡ ಹಾಲು ಒಕ್ಕೂಟ ಉಪವ್ಯವಸ್ಥಾಪಕ
ಡಾ. ಚಂದ್ರಶೇಖರ್ ಭಟ್ ದನಗಳ ಆರೋಗ್ಯ ಹಾಗೂ. ರೈತರು ಸಂಘಗಳಿಗೆ ನೀಡುವ ಹಾಲಿನ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು. ವಿಟ್ಲ ವಲಯ ವಿಸ್ತರಣಾಧಿಕಾರಿ. ಜಗದೀಶ್ ಎ ಲಾಭದಾಯಕ ಹೈನುಗಾರಿಕೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇಬ್ಬರು ಹಿರಿಯ ಸದಸ್ಯರುಗಳಾದ ಜಗನ್ನಾಥ್ ಆಳ್ವ ಮೈರಾ ಹಾಗೂ ಸುಂದರಿ ರಾಮ ನಾಯ್ಕ್ ಕೆಮ್ಮಟ್ಟೆ ರವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಿರಂತರ ಹಾಲು ಪೂರೈಸುತ್ತಿರುವ ರೈತರಿಗೆ ಸಂಘದ ವತಿಯಿಂದ ಪ್ರೋತ್ಸಾಹಕರ ಉಡುಗೊರೆ ನೀಡಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಜನೀಶ, ನಿರ್ದೇಶಕರುಗಳಾದ ಶಕುಂತಲಾ, ಜನಾರ್ಧನ ಪೂಜಾರಿ, ಜಯಪ್ರಕಾಶ್ ತೆಕ್ಕಿಪಾಪು, ಉಮೇಶ್ ಎನ್, ವಾಸಪ್ಪ ಗೌಡ, ಕೇಶವ ನಾಯ್ಕ, ರಮಣಿ, ರೂಪಲತಾ, ವಸಂತಿ ಉಪಸ್ಥಿತರಿದ್ದರು. ಹಾಲು ಪರೀಕ್ಷಕಿ ವೀಣಾ ಆನಂದ ಪ್ರಾರ್ಥಿಸಿ, ನಿರ್ದೇಶಕ ಜಯಪ್ರಕಾಶ್ ತೆಕ್ಕಿಪಾಪು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಬಂಗೇರ ವರದಿ ವಾಚಿಸಿದರು.










