Sunday, September 13, 2026
ಸುದ್ದಿ

ಸೆ.14 ಮತ್ತು ಸೆ.15ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರುಪಂಜ ಇದರ ವತಿಯಿಂದ 24ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ – ಕಹಳೆ ನ್ಯೂಸ್

ಪುತ್ತೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರುಪಂಜ ಇದರ ವತಿಯಿಂದ 24ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಕುಂಜೂರುಪಂಜದ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಸೆ.14 ಮತ್ತು ಸೆ.15ರಂದು ನಡೆಯಲಿದೆ.

ಜಾಹೀರಾತು

ಆ ಪ್ರಯುಕ್ತ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದುರ್ಗಾದೇವಿಯ ಹಾಗೂ ಶ್ರೀ ಗಣೇಶನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರುಪಂಜ ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸೆ.14ರಂದು ಬೆಳಿಗ್ಗೆ ಗಂಟೆ 8.00ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ ನಂತರ ಗಣಪತಿ ಹವನ, ಬೆಳಿಗ್ಗೆ ಗಂಟೆ 8.30ರಿಂದ ಭಜನಾ ಕಾರ್ಯಕ್ರಮ, ಬೆಳಿಗ್ಗೆ ಗಂಟೆ 9.30ರಿಂದ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00ರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೊಪ್ಪ ತಾಲೂಕಿನ CSI HPS ದೇವನ್ ಎಸ್ಟೇಟ್ ನ ನಿವೃತ್ತ ಮುಖ್ಯೋಪಾಧ್ಯಾಯ ಶರಣಪ್ಪ ಹಿರೇಮಣಿ, ಬಲ್ನಾಡು ಪ್ರಾ.ಕೃ.ಪ. ಸಹಕಾರ ಸಂಘ ಇದರ ನಿವೃತ್ತ ಸಿಬ್ಬಂದಿ ವೆಂಕಟಕೃಷ್ಣ ಭಟ್ ಪಾಲೆಚ್ಚಾರು, ಸ್ವಸ್ತಿಕ್ ಜ್ಯೋತಿಷ್ಯಾಲಯ ಆರ್ಲಪದವು ಇಲ್ಲಿನ ಜ್ಯೋತಿಷ್ಯ ಲೋಕೇಶ್ ಬಲ್ಯಾಯ ದೊಡ್ಡಡ್ಕ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸೆ.15 ರಂದು ಬೆಳಿಗ್ಗೆ ಗಂಟೆ 8.30ಕ್ಕೆ ಭಜನಾ ಕಾರ್ಯಕ್ರಮ, ಬೆಳಿಗ್ಗೆ ಗಂಟೆ 9.30ಕ್ಕೆ ಗಣಪತಿ ಹವನ, ಬೆಳಿಗ್ಗೆ ಗಂಟೆ 11.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 4.00ಕ್ಕೆ ವಿವಿಧ ಭಜನಾ ತಂಡಗಳಿAದ ಕುಣಿತ ಭಜನೆಯೊಂದಿಗೆ ವಿಜ್ರಂಭಣೆಯ ಶೋಭಾಯಾತ್ರೆ ಮೂಲಕ ಶ್ರೀ ದೇವರ ವಿಸರ್ಜನೆ ನಡೆಯಲಿದೆ.