Saturday, September 12, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲ ಇದರ ವತಿಯಿಂದ ನಡೆದ 49 ನೇ  ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ – ಕಹಳೆ ನ್ಯೂಸ್

  ವಿಟ್ಲ ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲ ಇದರ ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ, 49 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುದರ್ಶನ್ ಪಡಿಯಾರ್, ವಿಟ್ಲ ಪ್ರಸಿದ್ಧ ಕೋಟಿ ಕೆರೆಯಲ್ಲಿ ಈಜು ಬಾರದೆ ನೀರಿಗೆ ಇಳಿದ ಮೂರು ಮಕ್ಕಳ ಜೀವ ಉಳಿಸಿದ ಮಹೇಶ್ ಬನ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿಟ್ಲ ಪಿ ಎಂ ಶ್ರೀ ಶಾಲೆಯ ದೈಹಿಕ ಶಿಕ್ಷಕ ವಿದ್ಯಾ ಶಂಕರ್ ಇವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ಈ ಸಂಧರ್ಭದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ ಗಾಯತ್ರಿ ಗೀತಪ್ರಕಾಶ್, ವಿಟ್ಲ ಜೇ ಸಿ ಐ ಘಟಕದ ಅಧ್ಯಕ್ಷ ಸಂದೀಪ್ ವಿಟ್ಲ, ವಿಟ್ಲ ಜೈನ ಬಸದಿ ಅಧ್ಯಕ್ಷ ಜಿತೇಶ್ ಜೈನ್, ವಿಟ್ಲ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ ಎಮ್ ಪ್ರಸಾದ್ ಶೆಟ್ಟಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷೆ ಶ್ವೇತಾ ರವಿ ಕುಮಾರ್, ಯುವಕ ಮಂಡಲದ ಅಧ್ಯಕ್ಷ ಸುಧೀರ್ ನಾಯ್ಕ, ಗೌರವ ಅಧ್ಯಕ್ಷ ರಮೇಶ್ ಬಿ ಎಸ್, ಕಾರ್ಯದರ್ಶಿ ಗಂಗಾಧರ, ಕೋಶಾಧಿಕಾರಿ ಜನಾರ್ದನ ಪದ್ಮಶಾಲಿ, ವಸಂತ ಶೆಟ್ಟಿ, ಲೋಕರಾಜ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು