Sunday, August 30, 2026
ಪುತ್ತೂರುಸುದ್ದಿ

ಮನೆಯಲ್ಲಿ ನೀಡಲಾಗುವ ಸಂಸ್ಕಾರವೇ… ಸಂಸ್ಕೃತಿಯಾಗಿ ಸಮಾಜಕ್ಕೆ ಕೊಡುಗೆಯಾಗುತ್ತದೆ – ಡಾ. ಗೀತಾ ಕುಮಾರಿ ಟಿ. -ಕಹಳೆ ನ್ಯೂಸ್

ಪುತ್ತೂರು : ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಮತ್ತು ಶ್ರೀ ಸರಸ್ವತಿ ಮಹಿಳಾ ಮಂಡಳಿ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ, ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ, “ಭಾರತೀಯ ಸಂಸ್ಕೃತಿ ಮತ್ತು ಮಹಿಳೆ” ಎನ್ನುವ ವಿಷಯದ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ, ಉಪನ್ಯಾಸಕಾರರಾಗಿ ಆಗಮಿಸಿದ್ದ ಡಾ. ಗೀತಾ ಕುಮಾರಿ ಟಿ , ಕನ್ನಡ ಸಹಾಯಕ ಪ್ರಾಧ್ಯಾಪಕರು ವಿವೇಕಾನಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇವರು ಅಭಿಪ್ರಾಯಪಟ್ಟರು.

ಜಾಹೀರಾತು

ಆ .28 ರಂದು ಶುಕ್ರವಾರ ದರ್ಬೆ ಶ್ರೀ ಸಚ್ಚಿದಾನಂದ ಸೇವಾ ಸದನ ಇಲ್ಲಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕಾರಾಗಿ ಆಗಮಿಸಿ, ಭಾರತದ ವೇದಕಾಲದಲ್ಲಿ ಮಹಿಳೆಗಿದ್ದ ಸ್ಥಾನಮಾನ, ದೇವಿ ಸ್ವರೂಪಿಯಾದ ಸ್ತ್ರೀಯಲ್ಲಿ ಇರುವ ಶಕ್ತಿಗಳು, ಸ್ತ್ರೀ ನಿಭಾಯಿಸುವಂತ ವಿವಿಧ ಕ್ಷೇತ್ರಗಳು ಮತ್ತು ಕೆಲಸಗಳು, ಇವುಗಳೆಲ್ಲದರ ಬಗ್ಗೆ ಬಹಳ ಅರ್ಥವತ್ತಾಗಿ ಮಾಹಿತಿ ನೀಡಿದರು. ಸ್ತ್ರೀಯು ಬಾಲ್ಯದಲ್ಲಿ ತಂದೆಯ ಆಶ್ರಯ, ಯೌವನದಲ್ಲಿ ಪತಿಯ ಆಶ್ರಯ, ವೃದ್ಯಾಪ್ಯದಲ್ಲಿ ಮಕ್ಕಳ ಆಶ್ರಯದಲ್ಲಿ ಬದುಕಲೇಬೇಕಾದ ಅನಿವಾರ್ಯತೆ ಹಾಗೂ ಅಗತ್ಯತೆಯನ್ನು ಬಹಳ ಮನಮುಟ್ಟುವಂತೆ ತಿಳಿಸಿದರು. ಇಂದಿನ ಕಾಲದಲ್ಲಿ ಸ್ತ್ರೀಗೆ ಎಷ್ಟೇ ಹಕ್ಕುಗಳು ಸ್ಥಾನಮಾನಗಳು ಅಥವಾ ಹುದ್ದೆಗಳನ್ನು ನೀಡಲಾಗಿದ್ಜರೂ, ಸ್ತ್ರೀಯು ಕುಟುಂಬ ಎನ್ನುವ ಸಂಸ್ಕೃತಿ ಕೇಂದ್ರದ ಒಳಗೆ ಬದುಕಬೇಕಾಗುತ್ತದೆ. ತನ್ಮೂಲಕ ಮಕ್ಕಳಿಗೆ ಕುಟುಂಬಕ್ಕೆ ಸಮಾಜಕ್ಕೆ ಹಲವಷ್ಟು ಆದರ್ಶಗಳನ್ನು ರವಾನೆ ಮಾಡಬೇಕಾಗುತ್ತದೆ ಅನ್ನುವುದನ್ನು ಹಲವಷ್ಟು ಉದಾಹರಣೆಗಳ ಮೂಲಕ ತಿಳಿಯಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ವೀಣಾ ಕೆ ಶಿಕ್ಷಕಿ ಕುದ್ಮಾರು ಇವರು.. ಈ ಸಮಾಜದಲ್ಲಿ ಆದರ್ಶ ಪುರುಷರು ಆದರ್ಶ ಮಹಿಳೆಯರು ಈಗಲೂ ಜೀವಂತ ಉದಾಹರಣೆಯಾಗಿದ್ದಾರೆಂದರೆ. ಅದು ಓರ್ವ ತಾಯಿಯು ಮಕ್ಕಳಿಗೆ ನೀಡಿದ ಸಂಸ್ಕೃತಿಯ ಫಲ. ಸಂಸ್ಕೃತಿ ಎಂದರೆ ಗತಕಾಲದ ಆಚರಣೆಗಳಷ್ಟೇ ಅಲ್ಲ.. ಮಹಿಳೆಗೆ ನೀಡಲಾಗುವ ಸ್ವಾತಂತ್ರ್ಯ ಸಮಾನತೆ ಸ್ವಾವಲಂಬನೆ. ಮನೆಯಲ್ಲಿ ಆಚರಿಸಲಾಗುವ ವಿವಿಧ ಹಬ್ಬ-ಹರಿದಿನಗಳ ಮೂಲಕ ಸಂಸ್ಕೃತಿಯನ್ನು ಹೇಗೆ ಮಹಿಳೆ ಪೀಳಿಗೆಯಿಂದ ಪೀಳಿಗೆಗೆ ರವಾನಿಸುತ್ತಾಳೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟಕರಾಗಿ ಆಗಮಿಸಿದ್ದ ಶ್ರೀಮತಿ ಪುಷ್ಪಲತಾ ಎನ್ ವೃತ್ತಿಪರ ನಿರ್ದೇಶಕರು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು ಇವರು.., ಮಹಿಳೆ ಕೈಯಾಡಿಸುತ್ತಿರುವ ವಿವಿಧ ಕ್ಷೇತ್ರಗಳು, ಆರ್ಥಿಕ ಸ್ವಾವಲಂಬನೆಯಷ್ಟೇ ಮಹಿಳೆಗೆ ಮೀಸಲಾದರೆ ಸಾಲದು ಜೊತೆಗೆ ಕುಟುಂಬ ಸಮಾಜ ಇವುಗಳೆಲ್ಲದರ ಅಗತ್ಯ ಇದೆ, ಸಮಾಜದಲ್ಲಿನ ಮಹಾನ್ ಸಾಧಕ ಮಹಿಳೆಯರನ್ನು ಉಲ್ಲೇಖಿಸಿ ಅವರ ತತ್ವಾದರ್ಶಗಳನ್ನು ಆದರ್ಶವಾಗಿಟ್ಟುಕೊಂಡು ಮಾದರಿ ಜೀವನವನ್ನು ನಡೆಸಬೇಕು ಎಂಬುದನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟಿ ಶ್ರೀ ಚಂದ್ರಶೇಖರ್ ಭಟ್ ಮುಂಡುಗಾರು ಇವರು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಕುಮಾರಿ ಮಲ್ಲಿಕಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಶ್ರೀಮತಿ ರಂಜಿತಾ ಆರ್ ಪ್ರಭು ಇವರು ಸ್ವಾಗತಿಸಿ, ಶ್ರೀಮತಿ ಸಿಂಧು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮ ಸಂಯೋಜಕರೂ ಆದ ಶ್ರೀ
ಬಿಪಿನ್ ಚಂದ್ರ ಇವರು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗಿರುವ ಅಪೂರ್ವ ಸ್ಥಾನಮಾನಗಳನ್ನು ದೃಷ್ಟಾಂತಗಳ ಮೂಲಕ ವಿವರಿಸುತ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾಜದ 150ಕ್ಕೂ ಅಧಿಕ ಮಹಿಳೆಯರು ಹಾಗೂ ಅವರ ಕುಟುಂಬ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.