
ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಸರಸ್ವತೀ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿವೇಕ ಜಾಗೃತಿ ಕಾರ್ಯಕ್ರಮವು ಆಗಸ್ಟ್ 13 ಗುರುವಾರದಂದು ಯಾದವ ಶ್ರೀ ಸಭಾಂಗಣ ಹನುಮಾನ್ ನಗರದಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಉಪಸ್ಥಿತಿಯನ್ನು ರಾಮಕೃಷ್ಣ ಮಿಷನ್ ಕಡಪ ಇಲ್ಲಿಯ ಪೂಜ್ಯ ಸ್ವಾಮಿ ಅನುಪಮಾನಂದಾಜಿ ಅಲಂಕರಿಸಿ ಸ್ವಾಮಿ ವಿವೇಕಾನಂದರು ಶಿಕ್ಷಣದೊಂದಿಗೆ ಸಂಸ್ಕಾರ ಎಂಬ ವಿಷಯದ ಕುರಿತು ಮಾತನಾಡುತ್ತಾ ಮಾನವ ಮಾನವನಂತಾಗಲು ಸಂಸ್ಕಾರ ಅತಿ ಅಗತ್ಯ ಎಂಬುದನ್ನು ಅತ್ಯಂತ
ಅದ್ಭುತವಾಗಿ ವಿವರಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಸದಾಶಿವ ಭಟ್ ಅಧ್ಯಕ್ಷರು ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಕಡಬ ಇವರು ವಹಿಸಿದ್ದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಸಹಕಾರ್ಯನಿರ್ವಹಣಾಧಿಕಾರಿ ವೆಂಕಟರಮಣರಾವ್ ಮಂಕುಡೆ, ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಬೆಲ್ಲಾಳ ಗೋಪಿನಾಥ್ ರಾಜ್, ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶ್ರೀ ವಸಂತ.ಕೆ., ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ ರೈ. ಎಸ್, ಸರಸ್ವತೀ ವಿದ್ಯಾಲಯದ ಸಂಚಾಲಕಿ ಶ್ರೀಮತಿ ಸವಿತಾ ಶಿವಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪೂರ್ವ ಅಧ್ಯಕ್ಷರಾದ ಶ್ರೀ ರಮೇಶ್ ಕಲ್ಪುರೆ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಉಮೇಶ್ ಸಾಯಿ ರಾಮ್ ಶೆಟ್ಟಿ, ಶ್ರೀ ಸೀತಾರಾಮ ಗೌಡ ಎ, ಶ್ರೀ ಶಿವಪ್ರಸಾದ್ ಮೈಲೇರಿ, ಸದಾನಂದ ನಾಯ್ಕ್, ಪನ್ನಗ ಕಲ್ಪುರೆ, ರಾಮಕೃಷ್ಣ ಮಿಷನ್ ಇದರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕುಣಿತ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಚಿಂತ್ಯ ಬನ್ನಿಂತ್ತಾಯ, ಧನ್ವಿ ಕೆ, ಸಾತ್ವಿ, ಸಾನ್ವಿ ಶೆಟ್ಟಿ ಪ್ರಾರ್ಥಿಸಿದರು. ಶಿಕ್ಷಕಿ ಮಮತಾ ಎ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸೌಮ್ಯ ಕೆ.ಎ ವಂದಿಸಿದರು. ಶ್ರೀಮತಿ ಶಾಂತಿನಿ ಕಾರ್ಯಕ್ರಮ ನಿರೂಪಿಸಿದರು.











