Friday, August 14, 2026
ಸುದ್ದಿ

ಜಿನೀವಾದಲ್ಲಿ ವಿಶ್ವಸಂಸ್ಥೆಯ ಅಧಿವೇಶನ: ಎರಡನೇ ಬಾರಿ ಭಾರತವನ್ನು ಪ್ರತಿನಿಧಿಸಿದ ಕೆ.ಎಂ. ನಟರಾಜ್ – ಕಹಳೆ ನ್ಯೂಸ್

ಜಿನೀವಾ: ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿಯ (CERD) 118ನೇ ಅಧಿವೇಶನವು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿರುವ ಪಲೈಸ್ ಡೆಸ್ ನೇಷನ್ಸ್‌ನಲ್ಲಿ ಆಗಸ್ಟ್ 10ರಿಂದ 25ರವರೆಗೆ ನಡೆಯುತ್ತಿದೆ.

ಜಾಹೀರಾತು

ಆಗಸ್ಟ್ 11 ಮತ್ತು 12ರಂದು ಭಾರತದ ವರದಿಯ ಪರಿಶೀಲನೆ ನಡೆದಿದ್ದು, ಈ ಮಹತ್ವದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕ ಮೂಲದ ಹಿರಿಯ ನ್ಯಾಯವಾದಿ ಹಾಗೂ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ **ಕೆ.ಎಂ. ನಟರಾಜ್** ಅವರು ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೂ ಮೊದಲು ಕೂಡ ಶ್ರೀಯುತ ಕೆ.ಎಂ. ನಟರಾಜ್ ಅವರು ಬ್ರಿಕ್ಸ್‌ (BRICS) ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು, ಕರ್ನಾಟಕದ ಹೆಚ್ಚುವರಿ ಸಾಲಿಸಿಟರ್ ಜನರಲ್ (Additional Solicitor General) ಆಗಿ ಸೇವೆ ಸಲ್ಲಿಸಿ ಪ್ರಸ್ತುತ ಅವರು ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಅಲ್ಲದೆ ಭಾರತ ಸರ್ಕಾರದ ನಿಯೋಗಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ, ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ನಿಲುವು, ನಿರ್ಧಾರಗಳು ಹಾಗೂ ಸಲಹೆಗಳನ್ನು ಸಮರ್ಥವಾಗಿ ಜಗತ್ತಿನ ಮುಂದೆ ಮಂಡಿಸುತ್ತಿದ್ದಾರೆ.

ಹಲವಾರು ಬಾರಿ ದೇಶವನ್ನು ಪ್ರತಿನಿಧಿಸಿ, ವಿವಿಧ ನಾಯಕತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಹಾಗೂ ಭಾರತ ಸರ್ಕಾರದ ಹಿರಿಯ ನ್ಯಾಯವಾದಿಯಾಗಿ ಸಮಾಜ ಮತ್ತು ದೇಶದ ಹಿತಾಸಕ್ತಿಯ ವಿಚಾರಗಳನ್ನು ಸಮರ್ಥವಾಗಿ ಮಂಡಿಸುತ್ತಿರುವ ಕೆ.ಎಂ. ನಟರಾಜ್ ಅವರು ನಮ್ಮೂರಿನ ಹೆಮ್ಮೆ.

ಅವರ ಕಾರ್ಯದಕ್ಷತೆ, ವಿಷಯ ಮಂಡಿಸುವ ಶೈಲಿ, ನಾಯಕತ್ವದ ಗುಣ ಹಾಗೂ ದೇಶದ ಪರವಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಮರ್ಥವಾಗಿ ವಾದ ಮಂಡಿಸುವ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾಗಿದೆ. ದೇಶದ ಪ್ರತಿಷ್ಠೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿಯುತ್ತಿರುವ ಕೆ.ಎಂ. ನಟರಾಜ್ ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.