Recent Posts

Sunday, September 13, 2026
ಸುದ್ದಿ

ಹಿಂದೂ ಜನಜಾಗೃತಿ ಸಮಿತಿಯಿಂದ ದೇಶದಾದ್ಯಂತ 64 ಸ್ಥಳಗಳಲ್ಲಿ ಹಾಗೂ ಕರ್ನಾಟಕದ ವಿವಿಧೆಡೆ ‘ಗುರುಪೂರ್ಣಿಮಾ ಮಹೋತ್ಸವ’! – ಕಹಳೆ ನ್ಯೂಸ್

ಉಪ್ಪಿನಂಗಡಿ :ಇಂದು ಕೇವಲ ‘ಲವ್ ಜಿಹಾದ್’ ಅಷ್ಟೇ ಅಲ್ಲದೆ, ‘ಕಾರ್ಪೊರೇಟ್ ಜಿಹಾದ್’, ‘ಹಲಾಲ್ ಜಿಹಾದ್’, ಮತಾಂತರ ಮತ್ತು ಸುಳ್ಳು ನರೇಟಿವ್ (ಕಥನ) ನಂತಹ ಸಂಕಟಗಳಿಂದ ಹಿಂದೂ ಧರ್ಮದ ಮೇಲೆ ನಾಲ್ಕೂ ದಿಕ್ಕುಗಳಿಂದ ದಾಳಿಗಳಾಗುತ್ತಿವೆ. ಈ ಅದೃಶ್ಯ ಹಾಗೂ ವೈಚಾರಿಕ ಶತ್ರುಗಳನ್ನು ಗುರುತಿಸುವುದು ಹೇಗೆ ಮತ್ತು ಧರ್ಮರಕ್ಷಣೆಗಾಗಿ ಹಿಂದೂಗಳು ಹೇಗೆ ಸಂಘಟಿತರಾಗಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ 29 ರಂದು ದೇಶದಾದ್ಯಂತ 64 ಸ್ಥಳಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ಆಯೋಜಿಸಲಾಗಿದೆ.

ಜಾಹೀರಾತು

ಶ್ರೀ ರಾಘವೇಂದ್ರ ಮಠ ನೆಕ್ಕಿಲಾಡಿ , ಉಪ್ಪಿನಂಗಡಿಯಲ್ಲಿ ಗುರುಪೂರ್ಣಿಮೆಯನ್ನು ಆಯೋಜಿಸಲಾಗಿದೆ. ಈ ಮಹೋತ್ಸವದಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹೋರಾಟ ಮತ್ತು ಸಾಧನೆಯ ದಿಕ್ಕು’ ಎಂಬ ವಿಷಯದ ಮೇಲೆ ಜ್ವಲಂತ ವಿಚಾರಗಳನ್ನು ಮಂಡಿಸಲಾಗುವುದು. ಧರ್ಮರಕ್ಷಣೆ ಮತ್ತು ಸ್ವಸಂರಕ್ಷಣೆಗೆ ದಾರಿ ತೋರುವ ಈ ಮಹೋತ್ಸವದಲ್ಲಿ ಸಮಸ್ತ ಹಿಂದೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

*ಮಹೋತ್ಸವದ ಪ್ರಮುಖ ಆಕರ್ಷಣೆಗಳು:*
* ಶ್ರೀ ವ್ಯಾಸಪೂಜೆ ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರ ಪೂಜೆ (ಗುರುಪೂಜನ)
* ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ
* ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸನ್ಮಾನ
* ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯ ವ್ಯಕ್ತಿಗಳಿಂದ ವಿಶೇಷ ಮಾರ್ಗದರ್ಶನ
* ಸ್ವಸಂರಕ್ಷಣೆಯ ಸುಲಭ ಪದ್ಧತಿಗಳ ಪ್ರಾತ್ಯಕ್ಷಿಕೆ
* ‘ಸಮಿತಿ’ಯ ಪ್ರೇರಣಾಸ್ರೋತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಾರ್ಯದ ಕುರಿತ ಕಿರುಚಿತ್ರ (ಶಾರ್ಟ್ ಫಿಲ್ಮ್) ಪ್ರದರ್ಶನ
* ಗ್ರಂಥ ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮ ಜಾಗೃತಿ ಮೂಡಿಸುವ ಪೋಸ್ಟರ್ ಪ್ರದರ್ಶನ

ಆದ್ದರಿಂದ, ಸಮಸ್ತ ರಾಷ್ಟ್ರ ಮತ್ತು ಧರ್ಮಪ್ರೇಮಿ ಹಿಂದೂಗಳು ಕುಟುಂಬ ಸಮೇತರಾಗಿ ಆಗಮಿಸಿ ಈ ಅಮೂಲ್ಯ ಅವಕಾಶದ ಲಾಭ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.
ನೇರವಾಗಿ ಆಗಮಿಸಲು ಸಾಧ್ಯವಾಗದವರಿಗಾಗಿ, ಈ ಗುರುಪೂರ್ಣಿಮಾ ಮಹೋತ್ಸವವು ಅಂದು ಸಂಜೆ 5:00 ಗಂಟೆಗೆ ‘HJS Karnataka’ ಯೂಟ್ಯೂಬ್ ಚಾನೆಲ್ ಮೂಲಕ ನೇರಪ್ರಸಾರವಾಗಲಿದೆ.

*ಯೂಟ್ಯೂಬ್ ಚಾನೆಲ್ ಲಿಂಕ್: YouTube.com/HJSKarnataka*

*ಸ್ಥಳೀಯ ಗುರುಪೂರ್ಣಿಮಾ ಕಾರ್ಯಕ್ರಮದ ವಿವರ:*

*🛕ಸ್ಥಳ:* *ಶ್ರೀ ರಾಘವೇಂದ್ರ ಮಠ ನೆಕ್ಕಿಲಾಡಿ , ಉಪ್ಪಿನಂಗಡಿ*

*🗓️ದಿನಾಂಕ:* *ಬುಧವಾರ, 29 ಜುಲೈ 2026*

*⏰ಸಮಯ:* *ಸಂಜೆ 4.30 ಕ್ಕೆ*

📍 *ಗೂಗಲ್ ಲೊಕೇಶನ್* 👇🏻
https://maps.app.goo.gl/5buxnyYVSypPC45s7?g_st=aw

*ತಮ್ಮ ಸವಿನಯ,*
ಶ್ರೀ. ವಿಜಯ್ ಕುಮಾರ್
ಹಿಂದೂ ಜನಜಾಗೃತಿ ಸಮಿತಿ
*ಸಂಪರ್ಕ ಸಂಖ್ಯೆ: 7204082652*