Wednesday, July 29, 2026
ಸುದ್ದಿ

ಮಂಗಳೂರಿನಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೊಟೇಕಾರ್ ಬೀರಿ ಹಾಗೂ ಕೊಣಾಜೆ ಬಂಟ್ಸ್ ಭವನದ ಬಳಿ ಮಂಗಳವಾರ ಸಂಜೆ ಮಂಗಳೂರು ನಗರ ಪೊಲೀಸರು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದಿಢೀರ್ ಡ್ರಗ್ಸ್ ತಪಾಸಣೆ ಕಾರ್ಯಾಚರಣೆ ನಡೆಸಿದ್ದಾರೆ.

ಒಟ್ಟು 159 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಿದ್ದು, ಈ ಪೈಕಿ ಕೇವಲ ಒಬ್ಬ ವಿದ್ಯಾರ್ಥಿಯಲ್ಲಿ ಮಾತ್ರ ಡ್ರಗ್ಸ್ ಸೇವನೆ ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 4:30 ರಿಂದ 6 ಗಂಟೆಯ ನಡುವೆ ಮಂಗಳೂರು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರ ಉಸ್ತುವಾರಿಯಲ್ಲಿ, ಎಸಿಪಿ ದಕ್ಷಿಣ ಹಾಗೂ ಎಸಿಪಿ ಸೆಂಟ್ರಲ್ ವಿಭಾಗಗಳಿಂದ ಈ ಮಿಂಚಿನ ಕಾರ್ಯಾಚರಣೆ ನಡೆಯಿತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಹಾಗೂ ಕಾಲೇಜು ಬಸ್‌ಗಳನ್ನು ತಡೆದು ‘ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್’ ಮೂಲಕ ತಪಾಸಣೆ ನಡೆಸಲಾಯಿತು.

ಕೊಟೇಕಾರ್ ಬೀರಿ (ಉಳ್ಳಾಲ ವ್ಯಾಪ್ತಿ) : ಎಸ್‌ಡಿಎಂ ಕಾಲೇಜು, ನಿಟ್ಟೆ ಕೆ.ಎಸ್. ಹೆಗ್ಡೆ, ಸಂತ ಅಲೋಶಿಯಸ್, ಪಿ.ಎ. ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಯಿತು. ಈ ಪೈಕಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಯ ವರದಿ ಪಾಸಿಟಿವ್ ಆಗಿದೆ.