Tuesday, July 28, 2026
ಸುದ್ದಿ

12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ; ಮೊಗವೀರ ಮಹಾಸಭಾ ಸದಸ್ಯತ್ವ ಅಮಾನತಿಗೆ ವೈರತ್ವ ಬೊಲೆರೋ ಡಿಕ್ಕಿಪಡಿಸಿ ಕೊಲೆ, ಪಣಂಬೂರಿನ ಮೂವರು ಸೋದರರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು : 12 ವರ್ಷಗಳ ಹಿಂದೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಬಳಿ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಎಂಬವರನ್ನು ಪೂರ್ವ ದ್ವೇಷದಿಂದ ಕೊಲೆಗೈದ ಮೂವರು ಸೋದರರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಗಳಾದ ಸತೀಶ್ ಬೈಕಂಪಾಡಿ, ಪುಷ್ಪರಾಜ್, ಹರೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ ಎಂಬವರು ಜೀವಾವಧಿ ಶಿಕ್ಷೆಗೆ ಗುರಿಯಾದವರು. ಇವರು ಹಳೆ ದ್ವೇಷದಿಂದ ಒಳಸಂಚು ನಡೆಸಿ ಗಂಗಾಧರ ಪಾಂಗಾಳ ಎಂಬವರನ್ನು ಕೊಲೆ ಮಾಡಿರುತ್ತಾರೆ. ರಸ್ತೆ ಅಪಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿ, ಅಪಘಾತ ಪ್ರಕರಣ ದಾಖಲಾಗಿದ್ದು, ನಂತರ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಕಂಡುಬಂದಿದ್ದರಿಂದ ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಅ.ಕ್ರ ನಂಬ್ರ 98/2014 ಕಲಂ: 302, 201, 109, 120(ಬಿ) ಸಹಿತ 34 ಐಪಿಸಿರಂತೆ ಪ್ರಕರಣ ದಾಖಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಒಂದನೇ ಆರೋಪಿ ಸತೀಶ್ ಬೈಕಂಪಾಡಿ ಎಂಬಾತನನ್ನು ಬೈಕಂಪಾಡಿ ಮೊಗವೀರ ಮಹಾಸಭಾದ ಸದಸ್ಯತ್ವದಿಂದ ಅಮಾನತುಪಡಿಸಲು ಗಂಗಾಧರ ಪಾಂಗಾಳರವರೇ ಮೂಲ ಕಾರಣ ಎಂದು ಭಾವಿಸಿ ದ್ವೇಷ ಸಾಧಿಸಿದ ಆರೋಪಿಗಳು ಪೂರ್ವ ನಿಯೋಜಿತ ಒಳಸಂಚು ರೂಪಿಸಿ ಬೊಲೇರೋ ವಾಹನ ಮೂಲಕ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದು ಗಂಗಾಧರ ಪಾಂಗಾಳರವರು ಕೆಳಗೆ ಬಿದ್ದು ತಲೆ, ಮೈ ಕೈಗೆ ಪೆಟ್ಟಾಗಿ ಮೃತಪಟ್ಟ ಬಗ್ಗೆ ಧೃಢಪಡಿಸಿಕೊಂಡ ನಂತರ ಆರೋಪಿತರುಗಳು ತಾವು ಬಂದ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೊಂಡು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಲಾಗಿತ್ತು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಜುಲೈ 27 ರಂದು ಒಂದರಿಂದ ನಾಲ್ಕನೆಯ ಆರೋಪಿತರ ವಿರುದ್ಧ ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿರುತ್ತಾರೆ. ಸತೀಶ್ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ (ಇವರು ಸಹೋದರರು) ಇವರು ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ನಿವಾಸಿಗಳಾಗಿದ್ದು, ಮತ್ತೊಬ್ಬ ಆರೋಪಿ ಪುಷ್ಪರಾಜ್ ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ನಿವಾಸಿ. ಎಲ್ಲಾ ನಾಲ್ಕು ಜನ ಆರೋಪಿಗಳಿಗೆ ನ್ಯಾಯಾಧೀಶ ಜಗದೀಶ್. ವಿ ಎನ್ ಅವರು ಶಿಕ್ಷೆ ಪ್ರಕಟಿಸಿ ಆದೇಶಿಸಿರುತ್ತಾರೆ.

ಆರೋಪಿಗಳಾದ ಎ-1 ಆರೋಪಿ ಸತೀಶ್ ಬೈಕಂಪಾಡಿ(57), ಎ-3 ಆರೋಪಿ ಹರೀಶ್ ಬೈಕಂ ಹಾಡಿ(61), ಎ-4 ಆರೋಪಿ ಭಾಸ್ಕರ್ ಬೈಕಂಪಾಡಿ(63) ಅವರಿಗೆ ಕಲಂ:302, 120, 109 ಜೊತೆ 34 ಐಪಿಸಿ ರಲ್ಲಿ ಜೀವಾವಧಿ ಶಿಕ್ಷೆ ಮತ್ತು ₹.1 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾಶಿಕ್ಷೆ ಮತ್ತು ಪ್ರಕರಣದಲ್ಲಿ ಎ-2 ಆರೆ ಪಿ ಪುಷ್ಪರಾಜ್ (47 ) ಎಂಬಾತನಿಗೆ ಕಲಂ:302, 120, ಜೊತೆ 34 ಐಪಿಸಿ ರಲ್ಲಿ ಜೀವಾವಧಿ ಶಿಕ್ಷೆ ಮತ್ತು 7.15,000 ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಸಾದಾಶಿಕ್ಷೆ ಹಾಗು ಕಲಂ 201 r/w 34 IPC ಕಲಂನಡಿ ಎಲ್ಲಾ ಆರೋಪಿತರಿಗೆ ಎರಡು ವರ್ಷ ಸಾದಾ ಶಿಕ್ಷೆ ಮತ್ತು ತಲಾ ₹ 1000 ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿರುತ್ತಾರೆ. 60000/- ರೂಪಾಯಿ ವಿಧಿಸಿದ ದಂಡದ ಪೈಕಿ ರೂ. 50000/- ನ್ನು ಪರಿಹಾರವಾಗಿ ಮೃತನ ಮಗಳಿಗೆ ಮತ್ತು 16000/- ರೂ.ವನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಲಾಗಿದೆ. ಕೃತ್ಯಕ್ಕೆ ಬಳಸಿದ ಆರೋಪಿತರಿಗೆ ಸೇರಿದ ಬೊಲೆರೋ, ರೀಡ್ಸ್ ಹಾಗೂ ಮಾರುತಿ ಕಾರನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟುಗೋಲು ಹಾಕಲು ಆದೇಶಿಸಿದ್ದಾರೆ.

ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಅಗಿನ ಪೊಲೀಸ್ ನಿರೀಕ್ಷಕರುಗಳಾದ ಎನ್.ಆರ್ ಮುಕ್ರಿ, ಭಾಸ್ಕರ್ ರೈ ರವೀಶ್ ನಾಯಕ್ ಅವರುಗಳು ಭಾಗಶಃ ತನಿಖೆ ನಡೆಸಿದ್ದು, ಲೋಕೇಶ್ ಎ.ಸಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿರುತ್ತಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ್ ಅವರು ವಾದ ಮಂಡಿಸಿರುತ್ತಾರೆ.