Recent Posts

Saturday, September 12, 2026
ಸುದ್ದಿ

ಮನೆ ಕಟ್ಟಲು 15 ಲಕ್ಷ ಕೈಸಾಲ : ಇಬ್ಬರು ಮಕ್ಕಳೊಂದಿಗೆ ತಾಯಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ – ಕಹಳೆ ನ್ಯೂಸ್

ಕೋಲಾರ: ಸಾಲಭಾದೆ (Debt), ಸಾಲಗಾರರ ಕಿರುಕುಳದಿಂದ ತನ್ನಿಬ್ಬರು ಪ್ರಾಯದ ಮಕ್ಕಳೊಂದಿಗೆ  ತಾಯಿ  ಕೃಷಿ ಹೊಂಡದಲ್ಲಿ  ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ  ನಡೆದಿದೆ.

ಜಾಹೀರಾತು

ಕೋಲಾರ ತಾಲೂಕು ಛತ್ರಕೋಡಿಹಳ್ಳಿ ಬಳಿಯ ಕೃಷಿ ಹೊಂಡದಲ್ಲಿ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಗ್ಲಿಬೆಣಜೇನಹಳ್ಳಿ ಗ್ರಾಮದ ತಾಯಿ ಪ್ರಮೀಳ (40) ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಮೃತರು. ಇತ್ತೀಚೆಗೆ ಮನೆ ಕಟ್ಟಲು ಸುಮಾರು 15 ಲಕ್ಷ ಕೈ ಸಾಲ ಮಾಡಿಕೊಂಡಿದ್ದು, ಪದೆ ಪದೆ ಖಾಸಗಿ ಫೈನಾನ್ಸ್ ನವರ ಕಾಟ, ಇತ್ತ ಸಂಘಗಳಲ್ಲಿ ಸಾಲ ಪಡೆದಿದ್ದವರ ಕಾಟದಿಂದ ನಿನ್ನೆ ರಾತ್ರಿ ಮನೆಯಲ್ಲಿ ಪತಿ ಸುರೇಶ್ ಜೊತೆಗೆ ಗಲಾಟೆ ಮಾಡಿಕೊಂಡಿರುವ ಪ್ರಮೀಳ, ರಾತ್ರಿ 1 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮನೆಯಿಂದ ಹೊರ ಹೋಗಿರುವ ತಾಯಿ ಮಕ್ಕಳು ಮನೆಗೆ ಬಂದಿಲ್ಲ. ರಾತ್ರಿಯೆಲ್ಲಾ ಪತಿ ಸುರೇಶ್ ತನ್ನ ಪತ್ನಿ ಹಾಗೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾನೆ. ಅಲ್ಲದೆ ಫೋನ್ ಮಾಡಿದಾಗ ಸಂಬAದಿಕರ ಮನೆಗೆ ಬಂದಿರುವುದಾಗಿ ಹೇಳಿದ್ದರು. ಹಾಗಾಗಿ ಸುಮ್ಮನಾದೆ. ಆದರೆ ಬೆಳಗಾಗುವವಷ್ಟರಲ್ಲಿ ಹೀಗೆ ಶವಗಳಾಗಿ ಪತ್ತೆಯಾಗಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ. ಇನ್ನೂ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.