Tuesday, July 7, 2026
ಸುದ್ದಿ

ವೀರಕಂಭ ಗ್ರಾಮ ಪಂಚಾಯತ್ ನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ -ಕಹಳೆ ನ್ಯೂಸ್

ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ದ. ಕ. ಜಿ. ಪಂ.ಹಿರಿಯ ಪ್ರಾಥಮಿಕ ಶಾಲೆ, ಮಜಿ, ವೀರಕಂಭ ಇಲ್ಲಿ ಜೂಲೈ 7 ಮಂಗಳವಾರ ನಡೆಯಿತು.

ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕ ನಿರ್ದೇಶಕರು ಹಾಗೂ ವೀರಕಂಭ ಗ್ರಾಮ ಪಂಚಾಯತ್ ನ ಆಡಳಿತಾಧಿಕಾರಿ ದಿನೇಶ್ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಳಪದವು ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಯ ಬದಿಯಲ್ಲಿರುವ ಅಂಗಡಿ ಕಟ್ಟಡಗಳನ್ನು ಪಂಚಾಯತ್ ಸ್ವಾದೀನಕ್ಕೆ ಪಡಕೊಳ್ಳುವ ಬಗ್ಗೆ, ವಸತಿ ಯೋಜನೆಯಡಿಯಲ್ಲಿ ಮಂಜೂರಾದ ನಿವೇಶನ, 94ಸಿ, 94ಸಿಸಿ ಅಡಿಯಲ್ಲಿ ಮಂಜೂರಾದ ನಿವೇಶನಗಳಲ್ಲಿರುವ ಹಾಲಿ ಮನೆಗಳನ್ನು ರಿಪೇರಿ ಅಥವಾ ನವೀಕರಣಗೊಳಿಸಲು ಬೂಡ ಅನುಮೋದನೆ ಇಲ್ಲದೆ ಪಂಚಾಯತ್ ಹಂತದಲ್ಲಿ ಕಟ್ಟಡ ಪರವಾನಿಗೆ ನೀಡಲು ಸಂಬಂಧಪಟ್ಟವರನ್ನು ಆಗ್ರಹಿಸುವ ಬಗ್ಗೆ, ವೀರಕಂಭ ಗ್ರಾಮ ಪಂಚಾಯತ್ ಕಛೇರಿಗೆ ಸೂಕ್ತ ನಿವೇಶನ ಹಾಗೂ ಸಭಾಂಗಣವನ್ನು ಒಳಗೊಂಡ ಕಛೇರಿ ಕಟ್ಟಡಕ್ಕೆ ಸೂಕ್ತ ಅನುದಾನವನ್ನು ಮಂಜೂರು ಮಾಡಲು ಸರಕಾರಕ್ಕೆ ಬರಕೊಳ್ಳಲು ಹಾಗೂ ಪ್ರಸ್ತುತ ವೀರಕಂಭ ಗ್ರಾಮವನ್ನು ಸಜಿಪಮುನ್ನೂರು ಹೊಸ ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರಿಸಿ ಸರಕಾರದ ಆದೇಶವಾಗಿದ್ದು ವೀರಕಂಭ ಗ್ರಾಮವು ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿದ್ದು, ವೀರಕಂಭ ಗ್ರಾಮಕ್ಕೆ ವಿಟ್ಲವು ಕೇವಲ ಸುಮಾರು 6 ಕಿ.ಮೀ ಹತ್ತಿರದಲ್ಲಿದ್ದು, ಜನ ಸಾಮಾನ್ಯರು ಸುಲಭವಾಗಿ ಸಂಪರ್ಕಿಸಬಹುದಾಗಿದ್ದರಿಂದ ವೀರಕಂಭ ಗ್ರಾಮವನ್ನು ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿಯೇ ಉಳಿಸಿಕೊಳ್ಳಲು ಸಂಬಂಧಪಟ್ಟವರನ್ನು ಆಗ್ರಹಿಸಲು ಗ್ರಾಮ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪಂಚಾಯತ್ ಕಾರ್ಯದರ್ಶಿ ಸವಿತ ಆಡಳಿತ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಮಾಹಿತಿ ಹಂಚಿಕೊಂಡರು,

ಈ ಸಂದರ್ಭದಲ್ಲಿ ಗೋಳ್ತ ಮಜಲು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಳ್ಳುತ್ತಿರುವ ಪಂಚಾಯತ್ ಕಾರ್ಯದರ್ಶಿ ಸವಿತಾ ರವರನ್ನು ಗೌರವಿಸಿ ಅಭಿನಂದಿಸಲಾಯಿತು.

ವೀರಕಂಬ ಗ್ರಾಮ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರು, ಆರೋಗ್ಯ ಸುರಕ್ಷಣಾಧಿಕಾರಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಂಚಾಯತ್ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ರಾಮಸ್ಥರು ತಮ್ಮ ವಿವಿಧ ಬೇಡಿಕೆಯ ಮನವಿ ಸಲ್ಲಿಸಿದರು.
ವೀರಕಂಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ ಇವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.