Wednesday, May 27, 2026
ಕ್ರೀಡೆಸುದ್ದಿ

ಆರ್‌ಸಿಬಿ ವಿರುದ್ದ ಹೀನಾಯ ಸೋಲು : ಪ್ರಶ್ನೆ ಕೇಳಿದ್ದಕ್ಕೆ ಮಾಧ್ಯಮಗಳ ವಿರುದ್ಧವೇ ಗ್ಲೆನ್‌ ಫಿಲಿಪ್ಸ್‌ ಗರಂ

ಧರ್ಮಶಾಲಾ: ಕ್ವಾಲಿಫೈಯರ್‌ 1 ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೋತ ಗುಜರಾತ್‌ ಟೈಟಾನ್ಸ್‌ ಆಟಗಾರ ಗ್ಲೆನ್ ಫಿಲಿಪ್ಸ್ ಮಾಧ್ಯಮಗಳ ವಿರುದ್ಧ ಸಿಟ್ಟು ಹೊರಹಾಕಿದ ಪ್ರಸಂಗ ನಡೆದಿದೆ.

ಆಡಿದ 11 ಸದಸ್ಯರ ಬಳಗದಲ್ಲಿ ಫಿಲಿಪ್ಸ್ ಇಲ್ಲದಿದ್ದರೂ ಜಿಟಿ ಗ್ಲೇನ್ ಫಿಲಿಪ್ಸ್ ಅವರನ್ನು ಸುದ್ದಿಗೋಷ್ಠಿಗೆ ಕಳುಹಿಸಿತ್ತು. ಈ ವೇಳೆ ಪ್ರರ್ತಕರ್ತರೊಬ್ಬರು, ಆರ್‌ಸಿಬಿ ನೀಡಿದ್ದ 255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಗುಜರಾತ್ ಟೈಟಾನ್ಸ್ ತಂಡ ಮಾನಸಿಕವಾಗಿ ಮೊದಲೇ ಸೋಲನ್ನು ಒಪ್ಪಿಕೊಂಡಿತ್ತೇ ಎಂದು ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಫಿಲಿಪ್ಸ್, ಅದು ತೀರಾ ಮೂರ್ಖತನದ ಪ್ರಶ್ನೆ  ಎಂದು ಖಾರವಾಗಿ ಉತ್ತರಿಸಿದರು.

ಮೈದಾನಕ್ಕಿಳಿಯುವ ಯಾವುದೇ ತಂಡವೂ ಮೊದಲೇ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. 250 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಸ್ಕೋರ್‌ಬೋರ್ಡ್‌ ಒತ್ತಡ ವಿಪರೀತವಾಗಿರುತ್ತದೆ. ಪಂಜಾಬ್ ಕಿಂಗ್ಸ್‌ನಂತಹ ಕೆಲವೇ ತಂಡಗಳು ಇದನ್ನು ಈ ಹಿಂದೆ ಚೇಸಿಂಗ್‌ ಮಾಡಿ ತೋರಿಸಿವೆ. ಆದರೆ ಅದು ಕಾಣುವಷ್ಟು ಸುಲಭವಲ್ಲ ಎಂದು ತಂಡದ ಪರ ಬ್ಯಾಟ್ ಮಾಡಿದರು.

ಪಂದ್ಯದಲ್ಲಿ ಆಡದೇ ಇರುವುದು, ತಂಡದ ಕೆಲವು ಆಂತರಿಕ ನಿರ್ಧಾರಗಳು ಮತ್ತು ತಂತ್ರಗಳ ಕುರಿತು ಕೇಳಲಾದ ಕಠಿಣ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಲು ಅವರು ಸುದ್ದಿಗೋಷ್ಠಿಯಲ್ಲಿ ಸ್ವಲ್ಪ ತಡಕಾಡಿದರು. ನಾವು ಇಲ್ಲಿಯವರೆಗೆ ಸಾಕಷ್ಟು ಉತ್ತಮ ಕ್ರಿಕೆಟ್ ಆಡಿದ್ದೇವೆ. ಅದು ನಿಮಗೆ ತಿಳಿದಿದೆ. ಮುಂದಿನ ಪಂದ್ಯಕ್ಕೆ ತಂಡ ಸಿದ್ದವಾಗಲು ಏನು ಮಾಡಬೇಕೋ ಅದನ್ನು ಮಾಡಲಿದೆ ಎಂದು ಫಿಲಿಪ್ಸ್ ತಿಳಿಸಿದರು.

ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಪಾಟೀದಾರ್ ಒಬ್ಬ ಅದ್ಭುತ ಮತ್ತು ಯಾವುದೇ ಭಯವಿಲ್ಲದೆ ಆಡುವ ಬ್ಯಾಟರ್. ಪಂದ್ಯದ ಪರಿಸ್ಥಿತಿ ಏನೇ ಇದ್ದರೂ ಅವರು ತಮ್ಮ ನೈಸರ್ಗಿಕ ಆಕ್ರಮಣಕಾರಿ ಶೈಲಿಗೆ ಬದ್ಧರಾಗಿರುತ್ತಾರೆ ಮತ್ತು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೊಗಳಿದರು.

ಮೊದಲ ಕ್ವಾಲಿಫೈಯರ್‌ನಲ್ಲಿ ಸೋತರೂ ಗುಜರಾತ್ ಟೈಟಾನ್ಸ್‌ಗೆ ಐಪಿಎಲ್‌ನಿಂದ ಹೊರಬಿದ್ದಿಲ್ಲ. 2ನೇ ಕ್ವಾಲಿಫೈಯರ್ ಪಂದ್ಯ ಆಡಿ ಫೈನಲ್ ತಲುಪಲು ಇನ್ನೂ ಒಂದು ಅವಕಾಶವಿದೆ. ಇಂದು ಸನ್‌ರೈಸರ್ಸ್‌ ಹೈದರಾಬಾದ್‌ (SRH) ಮತ್ತು ರಾಜಸ್ಥಾನ ರಾಯಲ್ಸ್‌(RR) ನಡುವಿನ ವಿಜೇತರ ಜೊತೆ ಗುಜರಾತ್‌ ಕ್ವಾಲಿಫೈಯರ್ 2 ಆಡಲಿದೆ.