Recent Posts

Saturday, September 12, 2026
ಸುದ್ದಿ

ಕೊಟ್ಟಿಗೆಯಲ್ಲಿದ್ದ 15 ಅಡಿ ಬೃಹತ್ ಕಾಳಿಂಗ ಸರ್ಪ ಸೆರೆ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕೊಟ್ಟಿಗೆಯಲ್ಲಿದ್ದ 15 ಅಡಿಯ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹುಲುಮಕ್ಕಿ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು

ಹುಲುಮಕ್ಕಿಯ ಸುರೇಶ್ ಸೋಮವಾರ ಸಂಜೆ‌ ಕೊಟ್ಟಿಗೆಯಲ್ಲಿದ್ದ ಹಸುವನ್ನ ಹೊರಗಡೆ ಕಟ್ಟಲು ಹೋದಾಗ ಬೃಹತ್ ಕಾಳಿಂಗನನ್ನ ಕಂಡು ಹೆದರಿ ಹೊರ ಓಡಿ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಉರಗತಜ್ಞ ಹರೀಂದ್ರಾಗೆ‌ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ‌ ಬಂದ‌‌ ಸ್ನೇಕ್‌ ಹರೀಂದ್ರ, ಕೊಟ್ಟಿಗೆಯಲ್ಲಿ ಸಾಮಾನುಗಳನ್ನ ತುಂಬಿದ್ರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಕಾಳಿಂಗನನ್ನ ಸುಮಾರು‌ ಒಂದು ಗಂಟೆಗಳ ಕಾಲ‌ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಬಳಿಕ‌ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಕಾಳಿಂಗನನ್ನ ಅರಣ್ಯಕ್ಕೆ ಬಿಟ್ಟಿದ್ದಾರೆ. ಇದರಿಂದ ಮನೆ ಮಾಲೀಕ ಸುರೇಶ್ ನಿಟ್ಟುಸಿರು ಬಿಟ್ಟಿದ್ದಾರೆ.