Recent Posts

Thursday, September 17, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಕೇಪರ್ಡ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಧಾರ್ಮಿಕ ಸಂಸ್ಕಾರ ಶಿಕ್ಷಣ ಕೇಂದ್ರದ ವಾರ್ಷಿಕ ಸಂಭ್ರಮ -ಕಹಳೆ ನ್ಯೂಸ್

ಮಂಗಳೂರು :ದೇವಾಲಯ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ,ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಇದರ ಒಂದು ಕೇಂದ್ರವಾದ ಕೇಪರ್ಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾಯರ್ಚರಿಸುತ್ತಿರುವ ಮಹಿಷಮರ್ದಿನಿ ಧಾರ್ಮಿಕ ಸಂಸ್ಕಾರ ಶಿಕ್ಷಣ ಕೇಂದ್ರದ ವಾರ್ಷಿಕ ಸಂಭ್ರಮವು ಏಪ್ರಿಲ್ 21.2026 ರಂದು ನಡೆಯಿತು.

ಜಾಹೀರಾತು

ಕಲ್ಲಡ್ಕ ಗಣೇಶ್ ಪರೋಹಿತರು ಮಾತಾಪಿತೃ ವಂದನೆ ನಡೆಸಿಕೊಟ್ಟರು. ಅವರನ್ನು ಕಾರ್ಯಕ್ರಮದಲ್ಲಿ ಹೂ, ಹಣ್ಣು, ಹಂಪಲು, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರಳ್ಯರವರು ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು.

ಸಮರ್ಥ ಜನಸೇವಾ ಟ್ರಸ್ಟ್ ಪುಂಚಪ್ಪಾಡಿ ಅಧ್ಯಕ್ಷ ಗಿರಶಂಕರ್ ಸುಲಾಯರು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ದೇವಾಲಯ ಸಂವರ್ಧನಾ ಸಮಿತಿ, ಮಂಗಳೂರು ವಿಭಾಗ ಇದರ ಪ್ರಮುಖರಾದ ಕೇಶವ ಪ್ರಸಾದ್ ಮುಳಿಯ , ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಚಣ್ಣ ಗೌಡ ಹುದೇರಿ, ಉದ್ಯಮಿ ಹಾಗೂ ಕಸ್ತೂರಿ ನರ್ಸರಿ ಮಾಲಕ ಮಧುಸೂದನ್ ಕುಂಭಕ್ಕೋಡು, ರೋಟರಿ ಚಾರಿಟೇಬಲ್ ಟ್ರಸ್ಟ್ ನಿಯೋಜಿತ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್, ಧಾರ್ಮಿಕ ಸಂಸ್ಕಾರ ಶಿಕ್ಷಣ ಪ್ರಧಾನ ಸಂಚಾಲಕ ವಸಂತ ನಡುಬೈಲು, ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಉಪಸ್ಥಿತರಿದ್ದರು.

ಸಂಸ್ಕಾರ ಕೇಂದ್ರದ ಅಧ್ಯಕ್ಷ, ಧ್ರುವಕುಮಾರ್ ಕೇರ್ಪಡ ಪ್ರಸ್ತಾವನೆಗೈದು ಸ್ವಾಗತಿಸಿದರು, ಶ್ರೀಮತಿ ಮಧು ಯತೀಶ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಸುಹಾಸ್ ವಂದಿಸಿದರು, ನಳಿನಾಕ್ಷಿ ಕಲ್ಮಡ್ಕ ಮಾತಾಪಿತೃ ಕಾರ್ಯಕ್ರದಲ್ಲಿ ಸಹಕರಿಸಿದರು.