Recent Posts

Friday, June 19, 2026
ಸುದ್ದಿ

ಸಾರಿ ಗೊಂಡೆ ಹಾಗೂ ಸಾರಿ ಪೋಲ್ಡಿಂಗ್ ತರಬೇತಿ ಕಾರ್ಯಗಾರ- ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಹಾಗೂ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ 5 ದಿನಗಳ ಕಾಲ ಉಚಿತವಾಗಿ “ಸೀರೆ ಗೊಂಡೆ ಮತ್ತು ಸೀರೆ ಫೋಲ್ಡಿಂಗ್” ತರಬೇತಿ ಕಾರ್ಯಗಾರವನ್ನು ಗ್ರಾಮ ಅಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌದದಲ್ಲಿ ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನಿರ್ದೇಶಕರ ಡಿ. ದಿನೇಶ್ ಪೂಜಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದ್ದು ಸಮಾಜದಲ್ಲಿ ಅದೆಷ್ಟೋ ಕುಟುಂಬ ಸ್ವಾವಲಂಬಿ ಜೀವನ ನಡೆಸಲು ಸ್ಫೂರ್ತಿದಾಯಕವಾಗಿದೆ . ಹಾಗೂ 5 ದಿನದಲ್ಲಿ ಸಿಗುವ ತರಬೇತಿ ಪ್ರಯೋಜನವನ್ನು ಉತ್ತಮವಾಗಿ ಪಡೆದುಕೊಳ್ಳಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕರಾದ ಶ್ರೀಮತಿ ಧರಣಿ, ಯೋಜನಾಧಿಕಾರಿ ಜಯಾನಂದ ಪಿ,ತರಬೇತಿ ಶಿಕ್ಷಕಿ ಶ್ರೀಮತಿ ವಿಜಯ, ಕೋಣಾಜೆ ಒಕ್ಕೂಟದ ವಲಯ ಅಧ್ಯಕ್ಷರಾದ ರವಿ ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು .ಸೇವಾಪ್ರತಿನಿ ಉಷಾ ಸಹಕರಿಸಿದರು.