Recent Posts

Friday, June 19, 2026
ಸುದ್ದಿ

ಗೋಳ್ತಮಜಲು ಗ್ರಾಮ ದೈವಗಳಾದ ಶ್ರೀ ಗಿಳ್ಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಸೇವಾ ಟ್ರಸ್ಟ್ (ರಿ.) ಗೋಳ್ತಮಜಲು ಕಾಲಾವಧಿ ಜಾತ್ರಾ ಮಹೋತ್ಸವದ ಗೊನೆ ಮೂಹೂರ್ತ – ಕಹಳೆ ನ್ಯೂಸ್

ಬಂಟ್ವಾಳ : ಗೋಳ್ತಮಜಲು ಗ್ರಾಮ ದೈವಗಳಾದ ಶ್ರೀ ಗಿಳ್ಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಸೇವಾ ಟ್ರಸ್ಟ್ (ರಿ.) ಗೋಳ್ತಮಜಲಿನಲ್ಲಿ ಮಾ.01 ಮತ್ತು ಮಾ02 ರಂದು ನಡೆಯುವ ಕಾಲಾವಧಿ ಜಾತ್ರಾ ಮಹೋತ್ಸವದ ಗೊನೆ ಮೂಹೂರ್ತ ಕಾರ್ಯಕ್ರಮವು ಫೆ.22ರಂದು ನಡೆಯಿತು.

ಜಾಹೀರಾತು
ಜಾಹೀರಾತು

ಫೆ.28ರಂದು ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕುವುದು.. ಮಾ. 01ರಂದು ಬೆಳಗ್ಗೆ ಪಾಡಿ ಭಂಡಾರದ ಮನೆಯಿಂದ ಶ್ರೀ ದೈವಗಳ ಭಂಡಾರ ಬರುವುದು ಬಳಿಕ ಗಣಹೋಮ ಮತ್ತು ಶ್ರೀ ನಾಗ ರಕ್ತೇಶ್ವರೀ ಸಾನಿಧ್ಯದಲ್ಲಿ ತಂಬಿಲ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕುವುದು ಬಳಿಕ ಮೂಲಸ್ಥಾನದಲ್ಲಿ ತಂಬಿಲ ಸೇವೆ ನಡೆಯಲಿದೆ. ಅದೇ ದಿನ ರಾತ್ರಿ ಉಳ್ಳಾಕುಲು ದೈವಗಳ ಕೆರೆ ನೇಮೋತ್ಸವ ಮತ್ತು ಶ್ರೀ ಗಿಳ್ಕಿಂದಾಯ ದೈವದ ನೇಮೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾ. 02ರಂದು ಬೆಳಗ್ಗೆ ಶ್ರೀ ದೈವಗಳಿಗೆ ಹೂವಿನ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕುವುದು ಬಳಿಕ ಅದೇ ದಿನ ರಾತ್ರಿ ಶ್ರೀ ಉಳ್ಳಾಕುಲು ದೈವದ ವಲಸರಿ ಉತ್ಸವ ಮತ್ತು ಶ್ರೀ ಗಿಳ್ಕಿಂದಾಯ ದೈವದ ಹರಕೆ ನೇಮೋತ್ಸವ ನಡೆಯಲಿದೆ.

ಮಾ.04ರಂದು ಶ್ರೀ ಸತ್ಯದೇವತೆ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಫೆ.22ರಂದು ನಡೆದ ಗೊನೆಮೂಹೂರ್ತ ಕಾರ್ಯಕ್ರಮದಲ್ಲಿ ಶ್ರೀ ಗಿಳ್ಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಸೇವಾ ಟ್ರಸ್ಟ್ (ರಿ.) ಗೋಳ್ತಮಜಲು ಇದರ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.