Recent Posts

Friday, June 19, 2026
ಸುದ್ದಿ

ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್ – ಕಹಳೆ ನ್ಯೂಸ್

ಬೆಂಗಳೂರು: ದೈವ ನಿಂದನೆ ಪ್ರಕರಣದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೀಡಿದರೂ ನಟನಿಂದ ಯಾವುದೇ ಪ್ರತಿಕ್ರಿಯಿ ಸಿಕ್ಕಿಲ್ಲ.

ಜಾಹೀರಾತು
ಜಾಹೀರಾತು

ಬಾಲಿವುಡ್ ನಟನಿಗೆ ಈಗಾಗಲೇ‌ ಪೊಲೀಸರು ಎರಡು ನೋಟಿಸ್ ನೀಡಿದ್ದಾರೆ. ಆದರೆ, ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಹೀಗಾಗಿ, ಹೈಗ್ರೌಂಡ್‌ ಪೊಲೀಸರು ಕಾನೂನು ಮೊರೆ ಹೋಗಲು ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಿಷಬ್ ಶೆಟ್ಟಿ ನಟನೆಯ ಕಾಂತಾರ 2 ಸಿನಿಮಾದ ವಿಚಾರವಾಗಿ ಗೋವಾ ಫಿಲ್ಮ್‌ಫೇರ್ ಕಾರ್ಯಕ್ರಮದಲ್ಲಿ ರಣವೀರ್ ಮಾತನಾಡುವಾಗ ಯಟವಟ್ಟು ಮಾಡಿಕೊಂಡಿದ್ದರು. ದೈವದ ವಿಚಾರವಾಗಿ ಅವಹೇಳನ ಪದ ಬಳಕೆ ಎಂದು ಎಫ್‌ಐಆರ್ ದಾಖಲು ಮಾಡಲಾಗಿತ್ತು. ವಕೀಲ ಪ್ರಶಾಂತ್‌ ನೀಡಿದ ದೂರಿನ ಮೇರೆಗೆ‌ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾಗಿ 20 ಕ್ಕೂ ಹೆಚ್ಚು ದಿನಗಳೇ ಕಳೆದಿದೆ.

ಪೊಲೀಸರು ಎರಡು ಬಾರಿ ನೋಟಿಸ್ ನೀಡಿದ್ದಾರೆ. ಆದರೆ, ನೋಟಿಸ್‌ಗೆ ನಟ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನಟ ನೀಡಿಲ್ಲ. ಮುಂಬೈನಲ್ಲಿರುವ ರಣವೀರ್ ನಿವಾಸಕ್ಕೆ ಎರಡು‌ ನೋಟಿಸ್ ನೀಡಿರುವ ಪೊಲೀಸರು. ನಟನ ವಾಟ್ಸಪ್ ಗು ನೋಟಿಸ್ ಕಳುಹಿಸಿರುವ ಪೊಲೀಸರು. ಆದ್ರೆ ಯಾವ ನೊಟೀಸ್ ಗು ನಟನಿಂದ ಡೋಂಟ್ ಕೇರ್. ಹೀಗಾಗಿ ಮತ್ತೊಮ್ಮೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.