Friday, April 24, 2026
ಜಿಲ್ಲೆರಾಜ್ಯಸುದ್ದಿ

ಚಿನ್ನ – ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ : ಬರೋಬ್ಬರಿ 25,000 ರೂ ಇಳಿಕೆ- ಕಹಳೆ ನ್ಯೂಸ್

ಚಿನ್ನ ಪ್ರಿಯರಿಗೆ ಶುಭ ಶುಕ್ರವಾರವಾಗಿದೆ. ಕಳೆದ ವಾರದಂತೆಯೇ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಗುರುವಾರವೂ ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು. ಫೆಬ್ರವರಿ 6ರಂದು ಸಹ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ.

ಚಿನ್ನದ ಬೆಲೆಯಲ್ಲಿ 2,070 ರೂಪಾಯಿ ಕಡಿಮೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 25,000 ರೂಪಾಯಿ ಕಡಿಮೆಯಾಗಿದೆ. ಫೆಬ್ರವರಿ 6ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ನಿಖರವಾದ ವಿವರ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಚಿನ್ನ ಪ್ರಿಯರಿಗೆ ಶುಕ್ರವಾರ ಬಂಪರ್ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯು ಸತತ ಎರಡನೇ ದಿನವೂ ಕಡಿಮೆಯಾಗಿದೆ. ಬೆಳ್ಳಿಯಲ್ಲೂ ಕಳೆದ ಒಂದು ವಾರದಿಂದ ನಿರಂತರವಾಗಿ ಬೆಲೆ ಇಳಿಕೆಯಾಗುತ್ತಿದ್ದು. ಚಿನ್ನ ಮತ್ತು ಬೆಳ್ಳಿ ಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಚಿನ್ನದ ಬೆಲೆಯು 10 ಗ್ರಾಂಗೆ ಬರೋಬ್ಬರಿ 2 ಲಕ್ಷ ರೂಪಾಯಿ ಸಮೀಪಿಸಿತ್ತು. ಇದೀಗ ಚಿನ್ನದ ಬೆಲೆಯು ಹಳೆಯ ರೇಟ್‌ಗೆ ಬರುತ್ತಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಫೆಬ್ರವರಿ 6ರಂದು 24 ಕ್ಯಾರೆಟ್‌ನ 1ಗ್ರಾಂನ ಚಿನ್ನದ ಬೆಲೆಯು 15,235 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 1,52,350 ರೂ. ಆಗಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಬೆಲೆಯು 207 ರೂಪಾಯಿ ಹಾಗೂ 10 ಗ್ರಾಂನ ಬೆಲೆಯು 2,070 ಕಡಿಮೆಯಾಗಿದೆ.