Recent Posts

Friday, September 11, 2026
ಜಿಲ್ಲೆಬಳ್ಳಾರಿಸುದ್ದಿ

ಬಳ್ಳಾರಿ ಬ್ಯಾನರ್‌ ಬಡಿದಾಟದ ವಿಡಿಯೋ ಇದ್ದಲ್ಲಿ ಸೆಂಡ್‌ ಮಾಡಿ : ಸಿಐಡಿ ಮನವಿ -ಕಹಳೆ ನ್ಯೂಸ್

ಬಳ್ಳಾರಿ: ಜನಾರ್ದನ ರೆಡ್ಡಿ ಮನೆ ಮುಂದೆ ನಡೆದ ಬ್ಯಾನರ್ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಸಿಐಡಿ ತನಿಖೆ ಚುರುಕುಗೊಂಡಿದೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಗಲಭೆಯ ಕುರಿತು ಮಹತ್ವದ ದಾಖಲೆ ಕಲೆ ಹಾಕಿರುವ ಸಿಐಡಿ ತಂಡ ಘಟನೆ ಸಂಬಂಧ ಸಾರ್ವಜನಿಕರಿಂದಲೂ ವಿಡಿಯೋ, ಪೋಟೋ ಸಂಗ್ರಹಕ್ಕೆ ಮುಂದಾಗಿದೆ. ವಾಟ್ಸಪ್ ನಂಬರ್‌ ನೀಡಿ ವಿಡಿಯೋ ತುಣುಕುಗಳ ಹಾಕುವಂತೆ ಮನವಿ ಮಾಡಿಕೊಂಡಿದೆ.

ಗಲಭೆ ಸಂದರ್ಭದಲ್ಲಿ ಮೊಬೈಲ್ ರೆಕಾರ್ಡ್ ಮಾಡಿದ ವಿಡಿಯೋಗಳನ್ನ ಕೇಳಿದ ಸಿಐಡಿ ವಿಡಿಯೋ ಕಳುಹಿಸಿದವರ ಗೌಪ್ಯತೆ ಕಾಪಾಡುವುದಾಗಿ ತಿಳಿಸಿದೆ.