ಶ್ರಿ ರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ : ಸಾಹಿತ್ಯ ಕಮ್ಮಟ -ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಂಶತಿ ಸಂಭ್ರಮಾಚರಣೆಯ ಪ್ರಯುಕ್ತ ಸಾಹಿತ್ಯ ಕಮ್ಮಟ ಕಾರ್ಯಕ್ರಮವು ನಡೆಯಿತು. ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀಯುತ ಭಾಸ್ಕರ ಅಡ್ವಳ ನಿವೃತ್ತ ಮುಖ್ಯೋಪಾಧ್ಯರು, ಮಕ್ಕಳ ಕಲಾ ಲೋಕ ಬಂಟ್ವಾಳ ತಾಲೂಕು ಇದರ ಗೌರವ ಸಲಹೆಗಾರರು ಇವರು ಕಥೆಗಳನ್ನು ರಚಿಸುವ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳು ಬರೆದ ಕಥೆಗಳನ್ನು ಹೇಳಿಸಲಾಯಿತು. ಶ್ರೀ ರಮೇಶ್ ಎಂ ಬಾಯಾರು ರಾಜ್ಯ ಪ್ರಶಸ್ತಿ ಪುರಸ್ಕೃತರು ನಿವೃತ್ತ ಅಧ್ಯಾಪಕರು , ಮಕ್ಕಳ ಕಲಾ ಲೋಕ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಇವರು ಕವನ ರಚನೆಯ ಬಗ್ಗೆ ಮಾಹಿತಿಯನ್ನು ನೀಡಿದರು .
ನಂತರ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ದ್ವಿತೀಯ ವಾಣಿಜ್ಯ ವಿಭಾಗದ ಶಮನ್ ನಿರ್ವಹಿಸಿದರು.









