Recent Posts

Friday, September 18, 2026
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಕಾಡಾನೆ ದಾಳಿಗೆ ವ್ಯಕ್ತಿ ಸ್ಥಳದಲ್ಲೇ ಮೃತ್ಯು – ಕಹಳೆ ನ್ಯೂಸ್

ಬೆಳ್ತಂಗಡಿ: ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ 2 ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಅದನ್ನು ಓಡಿಸುವ ಸಂದರ್ಭ ಓರ್ವ ವ್ಯಕ್ತಿಗೆ ಆನೆ ಸೊಂಡಿಲಿನಿಂದ ಬಡಿದು, ತಿವಿದು ಗಂಭೀರ ಗಾಯಗೊಳಿಸಿದ್ದರಿಂದ ವ್ಯಕ್ತಿ ಮೃತಪಟ್ಟ ಘಟನೆ ಜು.17 ರ ಗುರುವಾರ ನಡೆದಿದೆ.

ಜಾಹೀರಾತು

ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ಳಂಬೆಳ್ಳಗೆ 2 ಕಾಡಾನೆಗಳು ಗೇರು ಪ್ಲಾಂಟೇಶನ್ ನಲ್ಲಿ ತಿರುಗಾಡುತ್ತಿದ್ದು ಕಂಡು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದಿದ್ದರು. ಆನೆ ಓಡಿಸುವ ಸಂದರ್ಭ ಆನೆ ತಿರುಗಿ ಬಂದು ಬಾಲಕೃಷ್ಣ ಶೆಟ್ಟಿ ಎಂಬವರಿಗೆ ತಿವಿದು, ಗಂಭೀರ ಗಾಯಗೊಳಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆನೆಗಳು ಅಲ್ಲೇ ಇದ್ದು, ಮೃತದೇಹ ಕೂಡ ಅಲ್ಲಿಯೇ ಇದೆ ಎಂದು ವರದಿಯಾಗಿದೆ.