Recent Posts

Thursday, September 17, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಶಕ್ತಿ ವಿದ್ಯಾಸಂಸ್ಥೆಯಲ್ಲಿ ಶಕ್ತಿ ಶ್ರೀ ಗಣೇಶೋತ್ಸವ  ಸೇವಾ ಸಮಿತಿಯಿಂದ ಅದ್ದೂರಿಯಾಗಿ ನಡೆದ ತೃತೀಯ ವರ್ಷದ ಗಣೇಶೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು ಸ: ಶಕ್ತಿ ನಗರದ ಶಕ್ತಿ  ವಿದ್ಯಾಸಂಸ್ಥೆಯ ವಸತಿ ನಿಲಯದದಲ್ಲಿರುವ ವಿದ್ಯಾರ್ಥಿಗಳು ಶಕ್ತಿ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ವತಿಯಿಂದ  ಅದ್ದೂರಿಯಾದ ಶ್ರೀ  ಗಣೇಶೋತ್ಸವವನ್ನು ದಿನಾಂಕ 14-09-2026ರಂದು ಆಚರಿಸಿದರು. ಗೌರಿ ಗಣೇಶದ ದಿನ ಶ್ರೀ  ಗೋಪಾಲಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ  ಮೆರವಣಿಗೆಯ ಮೂಲಕ ಗಣೇಶನ ಮೂರ್ತಿಯನ್ನು ಶಕ್ತಿ ವಿದ್ಯಾಸಂಸ್ಥೆಗೆ ತರಲಾಯಿತು. ಗಣೇಶ ಚತುರ್ಥಿಯ  ದಿನ ವೆಂಕಟ್ರಮಣ ಭಟ್ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನ  ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ  ಓಂಕಾರ  ದ್ವಜಾರೋಹಣವನ್ನು ಸಮಿತಿ ಅಧ್ಯಕ್ಷರಾದ ಶ್ರೀ  ಅರುಣ್ ನಾಯಕ್ ನೆರವೇರಿಸಿದರು. ನಂತರ ಪೂರ್ಣ ವಂದೇ  ಮಾತರಂಮೂಲಕ ಕಾರ್ಯಕ್ರಮಕ್ಕೆ ಚಾಲನೆ  ನೀಡಲಾಯಿತು. ಗಣೇಶೋತ್ಸವವನ್ನು ಪ್ರಾರಂಭಿಸಿ  ಸ್ವಾತಂತ್ರ್ಯ ಆಂದೋಲನಕ್ಕೆ ದೇಶದಲ್ಲಿ ಚಾಲನೆ ನೀಡಿದ  ಬಾಲಗಂಗಾಧರ ತಿಲಕ್ ಅವರ ಭಾವಚಿತ್ರಕ್ಕೆ
ಪುಷ್ಪರ್ಚನೆಯನ್ನು ಮಾಡಲಾಯಿತು. ಸಂಸ್ಥೆಯ  ನೂರಾರು ವಿದ್ಯಾರ್ಥಿಗಳು ಏಕಕಾಲದಲ್ಲಿ ಭಜನೆಯ ಮೂಲಕ  ದೇವರ ಸಂಕೀರ್ತನೆಯನ್ನು ನೆರವೇರಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಸತಿನಿಲಯದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮವನ್ನು ಆಯೋಜಿಸಿದರು. ಸಂಜೆ 4 ಗಂಟೆಗೆ  ಶ್ರೀ ಗಣೇಶನ ಭವ್ಯ ಶೋಭಾಯಾತ್ರೆಯನ್ನು  ಆಯೋಜಿಸಲಾಗಿತು. ಈ ಶೋಭಾಯಾತ್ರೆಗೆ ಸಂಸ್ಥೆಯ  ಸಂಸ್ಥಾಪಕರಾದ ಡಾ.ಕೆ.ಸಿ.ನಾೈಕ್, ಟ್ರಸ್ಟಿ ಸಗುಣ ಸಿ ನಾೈಕ್ ಮತ್ತು  ಅತಿಥಿಗಳಾದ ಶ್ರೀ ವಿಜಯ ಕುಮಾರು ನಾೈಕ್ ದಂಪತಿಗಳು  ಚಾಲನೆಯನ್ನು ನೀಡಿದರು. ಶೋಭಾಯಾತ್ರೆಯು  ವಿದ್ಯಾರ್ಥಿಗಳ ಚೆಂಡೆವಾದನ, ಕುಣಿತ ಭಜನೆ, ಹುಲಿವೇಷ, ತಾಸೆ  ಮತ್ತು ವಿವಿಧ ವೇಷಗಳ ಮೂಲಕ ಶಕ್ತಿ ವಿದ್ಯಾ  ಸಂಸ್ಥೆಯಿಂದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ರಸ್ತೆ,  ಪೋಲೀಸ್ ಕ್ವಾಟರ್ಸ್ ರಸ್ತೆಯ ಮೂಲಕ ಶಕ್ತಿ ನಗರ ಬಸ್ ನಿಲ್ದಾಣ  ದಿಂದ ಶ್ರೀಮುತ್ತಪ್ಪ ಗುಡಿಯಾಗಿ ಶಕ್ತಿ ವಿದ್ಯಾ ಸಂಸ್ಥೆಯ  ವಿದ್ಯಾರ್ಥಿಗಳ ಜೈಕಾರದೊಂದಿಗೆ ವಾಪಸು ಬಂದಿತು. ಈ  ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮುತ್ತಪ್ಪ ಗುಡಿಯ  ಟ್ರಸ್ಟಿಗಳು ವಿಶೇಷವಾಗಿ ದೇವರಿಗೆ ಪೂಜೆ ಸಲ್ಲಿಸಿ  ಶೋಭಾಯಾತ್ರೆಯನ್ನು ಭರ ಮಾಡಿಕೊಂಡರು. ಶಕ್ತಿ
ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಶಿಸ್ತು ಬದ್ದ ಮೆರವಣಿಗೆ  ಸಾರ್ವಜನಿಕರ ಗಮನ ಸೆಳೆಯಿತು.

ಶಕ್ತಿ ವಿದ್ಯಾಸಂಸ್ಥೆಯಲ್ಲಿ ವಿಸರ್ಜನಾ ಪೂಜೆ ನೆರವೇರಿಸಿ ಆಡಳಿತ  ಮಂಡಳಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ  ಪೂರ್ಣ ವಂದೇ ಮಾತರಂ ಮೂಲಕ ಸಂಸ್ಥೆಯ ಬಾವಿಯಲ್ಲಿ  ವಿಸರ್ಜನೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ  ಸಲಹೆಗಾರ ರಮೇಶ್ ಕೆ., ಶಕ್ತಿ ರೆಸಿಡೆನ್ಯಿಯಲ್ ಶಾಲೆಯ  ಪ್ರಾಂಶುಪಾಲೆ ಸುರೇಖಾ ಆರ್ ಭಟ್, ಶಕ್ತಿ ಗಣೇಶೋತ್ಸವ
ಸಮಿತಿ ಅಧ್ಯಕ್ಷರಾದ ಅರುಣ್ ನಾಯಕ್ ಉಪಸ್ಥಿತರಿದ್ದರು.