Recent Posts

Friday, September 18, 2026
ಸುದ್ದಿ

ಅಮೆರಿಕದ ಅಲಸ್ಕಾ ಕರಾವಳಿಯಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ -ಕಹಳೆ ನ್ಯೂಸ್

ಮೆರಿಕದಲ್ಲಿ ಮುಂಜಾನೆಯೇ ಭಾರೀ ದೊಡ್ಡ ಆಘಾತ ಎದುರಾಗಿದೆ. ಅಮೆರಿಕದ ಅಲಾಸ್ಕಾ ರಾಜ್ಯದ ಕರಾವಳಿ ಪ್ರದೇಶದಲ್ಲಿ ಬುಧವಾರ ಮುಂಜಾನೆ 7.3 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದ್ದು. ಸುನಾಮಿ ಆಗುವ ಸಾಧ್ಯತೆಯೂ ಇದೆ ಎಂದು ಅಮೆರಿಕದ (Geological Survey) ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

ಜಾಹೀರಾತು

ಇದರಿಂದ ಈ ಭಾಗದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಅಮೆರಿಕದ ಅಲಾಸ್ಕಾ ರಾಜ್ಯದ ಕರಾವಳಿ ಭಾಗದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭೂಕಂಪವು ಸ್ಥಳೀಯ ಸಮಯ 12:37ರ ಸುಮಾರಿಗೆ ಸಂಭವಿಸಿದ್ದು, ಇದರ ಕೇಂದ್ರಬಿಂದು ಸ್ಯಾಂಡ್ ಪಾಯಿಂಟ್ ದ್ವೀಪ ಪಟ್ಟಣದ ದಕ್ಷಿಣಕ್ಕೆ ಅಂದಾಜು 87 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗಿದೆ. ಭೂಕಂಪದ ನಂತರ ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಸುನಾಮಿ ಎದುರಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತೀವ್ರ ಭೂಕಂಪನದ ಬೆನ್ನಲ್ಲೇ ಸುನಾಮಿ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಅಲಾಸ್ಕಾದ ಪಾಮರ್‌ನಲ್ಲಿರುವ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ಮುನ್ಸೂಚನೆ ನೀಡಿದೆ.

ಏಕಕಾಲಕ್ಕೆ ಎದುರಾಗುತ್ತಿರುವ ಈ ಸಂಕಷ್ಟಗಳಿಂದ ಅಲ್ಲಿನ ಜನ ಭಯಬೀತರಾಗಿದ್ದಾರೆ. ದಕ್ಷಿಣ ಅಲಾಸ್ಕಾ ಹಾಗೂ ಅಲಾಸ್ಕಾ ಪರ್ಯಾಯ ದ್ವೀಪ ಸೇರಿದಂತೆ ವಿವಿಧ ಪೆಸಿಫಿಕ್ ಕರಾವಳಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಾರಂಭಿಕ ಮಾಹಿತಿಯ ಅನುಸಾರ ಇದೀಗ ಅಮೆರಿಕದ ಕೆಲವು ಕರಾವಳಿ ಪ್ರದೇಶಗಳಲ್ಲಿ ಮಾತ್ರ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಅಮೆರಿಕದ ವಿವಿಧ ಭಾಗಗಳಲ್ಲಿ ಮುನ್ಸೂಚನೆ ನೀಡುವುದಾಗಿ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮೆರಿಕ ಈ ಹಿಂದೆಯು ಈ ರೀತಿಯ ಭೀಕರ ಭೂಕಂಪನ ಹಾಗೂ ಸುನಾಮಿಗಳನ್ನು ಎದುರಿಸಿದೆ. ಈ ಬಾರಿಯ ಭೂಕಂಪನವು ತೀವ್ರವಾಗಿದ್ದು ಯಾವುದೇ ಕ್ಷಣದಲ್ಲಾದರೂ ಸುಮಾಮಿ ಎದುರಾಗುವ ಆತಂಕ ಎದುರಾಗಿದೆ. ಅಲಾಸ್ಕಾ ಭೂಕಂಪನ ಬೆನ್ನಲ್ಲೇ ಈ ಭಾಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಪ್ರದೇಶದಲ್ಲಿ 1964ರಲ್ಲಿ 9.2 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇದು ಉತ್ತರ ಅಮೆರಿಕಾದಲ್ಲಿ ಇದುವರೆಗೆ ದಾಖಲಾದ ಅತ್ಯಂತ ಪ್ರಬಲ ಭೂಕಂಪವಾಗಿದೆ. ಈ ಭೂಕಂಪದಿಂದಾಗಿ ಆಂಕಾರೇಜ್ ನಗರದಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ಅಲಾಸ್ಕಾ ಕೊಲ್ಲಿ, ಯುಎಸ್ ಪಶ್ಚಿಮ ಕರಾವಳಿ ಮತ್ತು ಹವಾಯಿ ಎನ್ನುವ ಪ್ರದೇಶದಲ್ಲಿ ತೀವ್ರ ಸುನಾಮಿ ಸಂಭವಿಸಿತ್ತು. ಭೂಕಂಪ ಮತ್ತು ಸುನಾಮಿಯಿಂದ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.