ಉದಯಗಿರಿ ಕುದ್ದುಪದವು ಸರಕಾರಿ ಹಿ.ಪ್ರಾಥಮಿಕ ಶಾಲೆಗೆ ,ವಿಟ್ಲ ರೋಟರಿ ಕ್ಲಬ್ ವತಿಯಿಂದ ಪ್ರಿಂಟರ್ ಕೊಡುಗೆ ಹಾಗೂ ಪದೋನ್ನತಿ ಹೊಂದಿದ ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ – ಕಹಳೆ ನ್ಯೂಸ್

ವಿಟ್ಲ : ಉದಯಗಿರಿ ಕುದ್ದುಪದವು ಸರಕಾರಿ ಹಿ.ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವಿಟ್ಲ ವತಿಯಿಂದ ಕೊಡುಗೆಯಾಗಿ ಪ್ರಿಂಟರ್ ರನ್ನು ಹಸ್ತಾಂತರಿಸುವ ಕಾರ್ಯಕ್ರಮವು ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಜಲಜಾಕ್ಷಿ ಎಂ.ಇ .ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಕಾಪ್ಟನ್ ದಾಸಪ್ಪ ಪೂಜಾರಿಯವರು ಪ್ರಿಂಟರ್ ಹಸ್ತಾಂತರಿಸಿ, ಮಾತನಾಡಿ ಈ ನಮ್ಮ ಕೊಡುಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿ, ಶಿಕ್ಷಣ ಸಂಸ್ಥೆಗೆ ಕೊಡುವ ಕೊಡುಗೆಗಳು ಶಿಕ್ಷಣದ ಗುಣಮಟ್ಟವನ್ನು ಎತ್ತರಿಸಲು ಸಹಾಯಕವಾಗಲೆಂದು ಶುಭ ಹಾರೈಸಿದರು.
ರೋಟರಿ ಸಂಸ್ಥೆ ಮೂಲಕ ಈ ಕೊಡುಗೆ ನೀಡಿದ ರೊ. ದಿನೇಶ್ ಕುಮಾರ್ ಮಾತನಾಡಿ ,ಸರಕಾರಿ ಶಾಲೆಗಳು ಹೆಚ್ಚಿನ ಸವಲತ್ತುಗಳನ್ನು ಹೊಂದುವ ಅಗತ್ಯತೆಯ ಬಗ್ಗೆ ತಿಳಿಸಿದರು.
ರೊ.ನಾರಾಯಣ ಪೂಜಾರಿ ಮಾತನಾಡಿ ಶಾಲೆ ಮತ್ತು ಪೋಷಕರ ಸಂಬಂಧ, ಸಹಭಾಗಿತ್ವದ ಅಗತ್ಯತೆಯ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಈ ಶಾಲೆಯಿಂದ ಹಿರಿಯ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ ರೇವತಿ. ಬಿ. ಯವರನ್ನು ಶಾಲೆ ಮತ್ತು ದಿವ್ಯಶಕ್ತಿ ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಬಿಡುಗಡೆಗೊಂಡ ಮುಖ್ಯ ಶಿಕ್ಷಕಿ ತನ್ನ ಸೇವಾವಧಿಯಲ್ಲಿ ಕಾರ್ಯನಿರ್ವಹಿಸಿದ ಎಸ್.ಡಿ.ಎಮ್.ಸಿ. ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು. ಹಾಗೂ ಶಾಲಾ ಶಿಕ್ಷಕಿಯರಿಗೆ ಮತ್ತು ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ರೊ .ವಸಂತ ಶೆಟ್ಟಿ,ಮಹಾಲಿಂಗ ಪಾಟಾಳಿ, ಗುರುವಪ್ಪ ನಾಯ್ಕ್, ಸತೀಶ್ ಪಾಟಾಳಿ,ಅಬ್ದುಲ್ ಕೆರೀಮ್, ಮತ್ತು ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಪೋಷಕರು ,ಮಕ್ಕಳು ಉಪಸ್ಥಿತರಿದ್ದರು ಮುಖ್ಯ ಶಿಕ್ಷಕಿ ರೇವತಿ.ಬಿ.ಸ್ವಾಗತಿಸಿ, ರೋಟರಿ ಕಾರ್ಯದರ್ಶಿ ರೊ ಕ್ಲಿಫರ್ಡ್ ವೇಗಸ್ ವಂದಿಸಿದರು. ಸುಜಾತ.ಪಿ ಮತ್ತು ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಅಶ್ವಿನಿ.ಕೆ ಮತ್ತು ದೀಪಾ ನಾಯಕ್ ಸಹಕರಿಸಿದರು.










