Recent Posts

Saturday, September 12, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಬಲ್ನಾಡು ದ.ಕ.ಜಿ.ಪಂ.ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಕುರಿತು ಕಾನೂನು ಮತ್ತು ಸ್ವಚ್ಚತೆ ಅರಿವು ಕಾರ್ಯಕ್ರಮ -ಕಹಳೆ ನ್ಯೂಸ್

ಬಲ್ನಾಡು : ಜೂ 21 ರಂದು ದ,ಕ.ಜಿ.ಪಂ.ಹಿ. ಪ್ರಾ.ಶಾಲೆ ಬಲ್ನಾಡು ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಕುರಿತು ಕಾನೂನುಗಳ ಅರಿವನ್ನು ಮಕ್ಕಳಿಗೆ ಪುತ್ತೂರು ನಗರ ಠಾಣೆಯ ಎಸ್‌ಐ ಯವರಾದ ಶ್ರೀ ಆಂಜನೇಯ ರೆಡ್ಡಿ ಇವರು ಉತ್ತಮವಾಗಿ ಮಾಹಿತಿ ನೀಡಿದರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದರು, ಮತ್ತು ಆರೋಗ್ಯ ಇಲಾಖೆಯವರಾದ ಶ್ರೀ ಯಶೋಧರ ಇವರು ಮಕ್ಕಳಿಗೆ ಸ್ವಚ್ಚತೆ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಿದರು.

ಜಾಹೀರಾತು

ವೇದಿಕೆಯಲ್ಲಿ ಪುತ್ತೂರು ನಗರ ಠಾಣೆ ಎಸ್‌ಐ ಆಂಜನೇಯ ರೆಡ್ಡಿ, ಬಲ್ನಾಡು ಗ್ರಾಮಪಂಚಾಯತ್ ಸದಸ್ಯರಾದ ಮತ್ತು ಹಿರಿಯ ವಿದ್ಯಾರ್ಥಿ ಮತ್ತು ವಿದ್ಯಾಭಿಮಾನಿಗಳ ಸಂಘದ ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್, ರೋಟರಿ ಕ್ಲಬ್ ಪುತ್ತೂರು ಯುವಕ ದ ಅಧ್ಯಕ್ಷರಾದ ಕುಸುಮರಾಜ್, ಅಬೂಬಕ್ಕರ್ ಉಜ್ರುಪಾದೆ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಬಲ್ನಾಡು ಇದರ ಅಧ್ಯಕ್ಷರಾದ ಸತೀಶ್ ಗೌಡ ಒಳಗುಡ್ಡೆ, ಆರೋಗ್ಯ ಇಲಾಖೆಯ ಜಯಶ್ರೀ, ಯಶೋಧರ ಶಾಲಾ SDMC ಅಧ್ಯಕ್ಷರಾದ ರಾಧಾಕೃಷ್ಣ ಪೂಜಾರಿ ನಾಗಾಗದ್ದೆ,ಶಾಲಾ ಮುಖ್ಯಗುರುಗಳಾದ ಭವಾನಿ ಎಂ, ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅತಿಥಿ ಶಿಕ್ಷಕಿ ಚಿತ್ರಲೇಖ ಇವರು ಕಾರ್ಯಕ್ರಮ ನಿರೂಪಿಸಿದರು,ಮಕ್ಕಳು ಪ್ರಾರ್ಥಿಸಿದರು,ಭವಾನಿ ಇವರು ಸ್ವಾಗತಿಸಿ ವಂದಿಸಿದರು, SDMC ಉಪಾಧ್ಯಕ್ಷರಾದ ಯಶೋಧ ಕಟ್ಟೆಮನೆ, GPT ಶಿಕ್ಷಕರಾದ ಮಂಜಪ್ಪ HR, ಗೌರವ ಶಿಕ್ಷಕಿಯಾದ ಮನೋರಮಾ,ಅತಿಥಿ ಶಿಕ್ಷಕಿಯರಾದ ಪವಿತ್ರ,ನಮಿತಾ, Lkg ಶಿಕ್ಷಕಿ ಉಷಾ ಇವರು ಸಹಕರಿಸಿದರು.