Recent Posts

Saturday, September 12, 2026
ಉಡುಪಿಜಿಲ್ಲೆಮೂಡಬಿದಿರೆಸುದ್ದಿ

ಮೋಹನ ಆಳ್ವರಿಗೆ ಡಾ.ಜಿ.ಪಿ ರಾಜರತ್ನಂ ಪ್ರಶಸ್ತಿ -ಕಹಳೆ ನ್ಯೂಸ್

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕ ಡಾ.ಮೋಹನ ಆಳ್ವ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡಿದ 2020-21ನೇ ಸಾಲಿನ ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕೇತ್ರದಲ್ಲಿ ಈಚೆಗೆ ಪ್ರದಾನ ಮಾಡಲಾಯಿತು.‌

ಜಾಹೀರಾತು

17 ವರ್ಷಗಳಿಂದ ನಡೆದುಕೊಂಡು ಬಂದ ‘ಆಳ್ವಾಸ್ ನುಡಿಸಿರಿ’ ಕನ್ನಡ ಸಾಹಿತ್ಯ ಸಮ್ಮೇಳನ, 30 ವರ್ಷಗಳಿಂದ ನಿರಂತರರ ಆಯೋಜನೆಗೊಳ್ಳುತ್ತಿರುವ ‘ಆಳ್ವಾಸ್ ವಿರಾಸತ್’ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯದ ನಂ. 1 ಕನ್ನಡ ಮಾಧ್ಯಮ ಶಾಲೆಯೆಂದು ಗೌರವಕ್ಕೆ ಪಾತ್ರವಾಗಿರುವ ಸಂಪೂರ್ಣ ಉಚಿತ ಶಿಕ್ಷಣದ ‘ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ’, ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಆಳ್ವಾಸ್ ಧೀಂಕೀಟ ಯಕ್ಷಗಾನ ಅಧ್ಯಯನ ಕೇಂದ್ರಗಳ ಮೂಲಕ ಕನ್ನಡ ನಾಡು-ನುಡಿ, ಕಲೆ, ಸಂಸ್ಕೃತಿಗಳಿಗೆ ನೀಡಿದ ಕೊಡುಗೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು