ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ! – ಕಹಳೆ ನ್ಯೂಸ್

ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ನಾಗು ಎಂಬ ಶನಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ನಾಲ್ಕು ವರ್ಷಗಳ ಹಿಂದೆ ಹಲಗೆ ಸೀನಿಯರ್ ವಿಭಾಗಕ್ಕೆ ಎಂಟ್ರಿ ನೀಡಿದ್ದ ನಾಗು ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಬೈಂದೂರಿನಿಂದ ಎಲ್ಲರೂ ಬಂಢಾರಮನೆ ಸೇರಿದ್ದ ನಾಗು, ಬಳಿಕ ಉಡುಪಿ ಚಿತ್ಪಾಡಿ ಅಪ್ಪು ಶೆಟ್ಟಿ ಅವರ ಹಟ್ಟಿ ಸೇರಿದ್ದ. ಎರಡು ವರ್ಷಗಳ ಹಿಂದೆ ನಾಗು ಕೋಣವನ್ನು ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರು ಖರೀದಿ ಮಾಡಿದ್ದರು.

ಕೂಟಗಳಲ್ಲಿ ಸಕ್ರಿಯವಾಗಿದ್ದ ಎರಡು ಕೋಣಗಳನ್ನು ಎರಡು ವಾರಗಳ ಅಂತರದಲ್ಲಿ ಕಂಬಳ ಕ್ಷೇತ್ರ ಕಳೆದುಕೊಂಡಿದೆ.











