Friday, April 24, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಮಳೆಯ ಆರ್ಭಟಕ್ಕೆ ಸಿಲುಕಿ ತಾಲೂಕಿನ‌ ಅನೇಕ ಕಡೆಗಳಲ್ಲಿ ಮನೆಗಳಿಗೆ ಹಾನಿ – ಕಹಳೆ ನ್ಯೂಸ್

ಬಂಟ್ವಾಳ ಕಸಬಾ ಗ್ರಾಮದ ಬೇಬಿ ಪೂಜಾರಿ ಎಂಬವರ ಮನೆಗೆ ತಡೆಗೋಡೆ ಕುಸಿದು ಕಚ್ಛಾಮನೆ ಭಾಗಶಃ ಹಾನಿಯಾಗಿದೆ. ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ.

ನಾವೂರ ಗ್ರಾಮದ ಪೂಪಾಡಿಕಟ್ಟೆ ಜಯಂತಿ ಎಂಬವರ ಮನೆಯ ಬದಿಯ ಬರೆ ಜರಿದು ಮನೆಗೆ ಹಾನಿಯಾಗಿದೆ. ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ನಾವೂರ ಗ್ರಾಮದ ಕೆಮ್ಮಟ್ಟೆ ಎಂಬಲ್ಲಿ ರೇವತಿ ಎಂಬವರ ಮನೆಯ ಸಮೀಪ ಪಿ.ಡಬ್ಲೂಡಿ ರಸ್ತೆಯ ಬದಿ ಬರೆ ಕುಸಿತ ವಾಗಿದೆ. ಕೆದಿಲ ಗ್ರಾಮದ ಕುದುಂಬ್ಲಾಡಿ ಎಂಬಲ್ಲಿ ಜುಬೈದಾರವರ ಮನೆ ಬದಿ ಬರೆ ಜರಿದು ಬಿದ್ದಿದೆ.
ಮಾಣಿಲ ಗ್ರಾಮದ ಪಳನೀರ್ ಎಂಬಲ್ಲಿ ದೇವಕಿ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ಮಾಣಿಲ ಗ್ರಾಮದ ಪಳನೀರ್ ಎಂಬಲ್ಲಿ ಬೇಡು ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಬರೆಪ್ಪಾಡಿ ಎಂಬಲ್ಲಿ ಸೂರಿಕುಮೇರು ಸಂಪರ್ಕದ ಒಳರಸ್ತೆಗೆ ದರೆ ಕುಸಿದು ಸಂಪರ್ಕ ಕಡಿತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು